ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಹರಾಜು ಪ್ರಕ್ರಿಯೆಯು ಡಿ.16ರಂದು ಅಬುಧಾಬಿಯಲ್ಲಿ ಜರುಗಲಿದೆ.

ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 359 ಆಟಗಾರರ ಹೆಸರಿದೆ. ಹತ್ತು ತಂಡಗಳಲ್ಲಿ 77 ಸ್ಥಾನಗಳು ಖಾಲಿಯಿದ್ದು, 31 ವಿದೇಶಿ ಆಟಗಾರರನ್ನು ಕೊಂಡುಕೊಳ್ಳಬಹುದಾಗಿದೆ.

ಒಂದು ತಂಡವು 8 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ.

ಯಾವ ತಂಡಗಳು ಎಷ್ಟು ಆಟಗಾರರನ್ನು ಕೊಂಡುಕೊಳ್ಳಬಹುದು..

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ): ಹಾಲಿ ಚಾಂಪಿಯನ್ ಆರ್ಸಿಬಿ ತಂಡದ ಬಳಿ 6 ವಿದೇಶಿ ಆಟಗಾರರು ಸೇರಿದಂತೆ 17 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 2 ವಿದೇಶಿ ಆಟಗಾರರು ಸೇರಿದಂತೆ 8 ಮಂದಿಯನ್ನು ಕೊಂಡುಕೊಳ್ಳಬಹುದು.

ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ): ಐದು ಬಾರಿಯ ಐಪಿಎಲ್ ಚಾಂಪಿಯನ್ ಸಿಎಸ್ಕೆ ತಂಡದ ಬಳಿ 4 ವಿದೇಶಿ ಆಟಗಾರರು ಸೇರಿದಂತೆ 16 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ 9 ಮಂದಿಯನ್ನು ಖರೀದಿಸಬಹುದಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್: ಚೊಚ್ಚಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಳಿ 3 ವಿದೇಶಿ ಆಟಗಾರರು ಸೇರಿದಂತೆ 17 ಆಟಗಾರರಿದ್ದಾರೆ. 5 ವಿದೇಶಿ ಆಟಗಾರರು ಸೇರಿದಂತೆ 8 ಮಂದಿಯನ್ನು ಮಿನಿ ಹರಾಜಿನಲ್ಲಿ ಕೊಂಡುಕೊಳ್ಳಬಹುದಾಗಿದೆ.

ಗುಜರಾತ್ ಟೈಟನ್ಸ್: ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ಗುಜರಾತ್ ಟೈಟನ್ಸ್ ತಂಡದ ಬಳಿ 4 ವಿದೇಶಿ ಆಟಗಾರರು ಸೇರಿದಂತೆ 20 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ 5 ಮಂದಿಯನ್ನು ಖರೀದಿಸಬಹುದಾಗಿದೆ.

ಕೋಲ್ಕತ್ತ ನೈಟ್ ರೈಡರ್ಸ್(ಕೆಕೆಆರ್): ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ಬಳಿ ಅತಿ ಹೆಚ್ಚು ಮೊತ್ತವಿದ್ದು, ತಂಡದಲ್ಲಿ 2 ವಿದೇಶಿ ಆಟಗಾರರು ಸೇರಿದಂತೆ 12 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 6 ವಿದೇಶಿ ಆಟಗಾರರು ಸೇರಿದಂತೆ 13 ಮಂದಿಯನ್ನು ಕೊಂಡುಕೊಳ್ಳಬಹುದಾಗಿದೆ.

ಲಖನೌ ಸೂಪರ್ ಜೈಂಟ್ಸ್(ಎಲ್ಎಸ್ಜಿ): ಎಲ್ಎಸ್ಜಿ ತಂಡದಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ 19 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ 6 ಮಂದಿಯನ್ನು ಖರೀದಿಸಬಹುದಾಗಿದೆ.

ಮುಂಬೈ ಇಂಡಿಯನ್ಸ್: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ 7 ವಿದೇಶಿ ಆಟಗಾರರು ಸೇರಿದಂತೆ 20 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 1 ವಿದೇಶಿ ಆಟಗಾರರು ಸೇರಿದಂತೆ 5 ಮಂದಿಯನ್ನು ಕೊಂಡುಕೊಳ್ಳಬಹುದಾಗಿದೆ. ತಂಡದ ಬಳಿ ಕಡಿಮೆ ಮೊತ್ತವಿದ್ದು, ಅನ್ಕ್ಯಾಪ್ಡ್ ಆಟಗಾರರಿಗೆ ಮಣೆಹಾಕುವ ಸಾಧ್ಯತೆಯಿದೆ.

ಪಂಜಾಬ್ ಕಿಂಗ್ಸ್: ಬಾಲಿವುಡ್ ನಟಿ ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡದಲ್ಲಿ 6 ವಿದೇಶಿ ಆಟಗಾರರು ಸೇರಿದಂತೆ 21 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 2 ವಿದೇಶಿ ಆಟಗಾರರು ಸೇರಿದಂತೆ 4 ಮಂದಿಯನ್ನು ಖರೀದಿಸಬಹುದಾಗಿದೆ.

ರಾಜಸ್ಥಾನ ರಾಯಲ್ಸ್: ಐಪಿಎಲ್ ಮೊದಲ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದ ಬಳಿಕ, ಚಾಂಪಿಯನ್ ಪಟ್ಟಕ್ಕೇರಲು ವಿಫಲವಾಗಿರುವ ರಾಜಸ್ಥಾನ ರಾಯಲ್ಸ್ ತಂಡದಲ್ಲಿ 7 ವಿದೇಶಿ ಆಟಗಾರರು ಸೇರಿದಂತೆ 16 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 1 ವಿದೇಶಿ ಆಟಗಾರರು ಸೇರಿದಂತೆ 9 ಮಂದಿಯನ್ನು ಕೊಂಡುಕೊಳ್ಳಬಹುದಾಗಿದೆ.

ಸನ್ರೈಸರ್ಸ್ ಹೈದರಾಬಾದ್: ಸ್ಪೋಟಕ ಆಟಗಾರರ ದಂಡನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ 6 ವಿದೇಶಿ ಆಟಗಾರರು ಸೇರಿದಂತೆ 15 ಆಟಗಾರರಿದ್ದಾರೆ. ಮಿನಿ ಹರಾಜಿನಲ್ಲಿ 2 ವಿದೇಶಿ ಆಟಗಾರರು ಸೇರಿದಂತೆ 10 ಮಂದಿಯನ್ನು ಖರೀದಿಸಬಹುದಾಗಿದೆ.

ಐಪಿಎಲ್ ಮಿನಿ ಹರಾಜು ಮಂಗಳವಾರ (ಡಿ.16) ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಅಥವಾ ಜಿಯೋ ಹಾಟ್ಸ್ಟಾರ್ ಒಟಿಟಿ ಮತ್ತು ವೆಬ್ಸೈಟ್ನಲ್ಲಿ ವೀಕ್ಷಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.