ನವಿ ಮುಂಬೈ: ಆರಂಭ ಆಟಗಾರ್ತಿಯರಾದ ಗ್ರೇಸ್ ಹ್ಯಾರಿಸ್ (83 ರನ್, 40 ಎಸೆತ) ಮತ್ತು ನಾಯಕಿ ಸ್ಮೃತಿ ಮಂದಾನ ಅವರ ಅಮೋಘ ಶತಕದ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸೋಮವಾರ ಯುಪಿ ವಾರಿಯರ್ಸ್ ತಂಡದ ವಿರುದ್ಧ 9 ವಿಕೆಟ್ಗಳ ಸುಲಭ ಜಯ ಗಳಿಸಿತು. ಇದು ಆರ್ಸಿಬಿಗೆ ಸತತ ಎರಡನೇ ಜಯ.

ಗೆಲುವಿಗೆ 144 ರನ್ಗಳ ಗುರಿ ಎದುರಿಸಿದ್ದ ಆರ್ಸಿಬಿ ಕೇವಲ 12.1 ಓವರುಗಳಲ್ಲಿ 1 ವಿಕೆಟ್ಗೆ 145 ರನ್ ಬಾರಿಸಿತು. ಆಸ್ಟ್ರೇಲಿಯಾದ ಗ್ರೇಸ್ ಕೇವಲ 10 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಸಿಡಿಸಿದರು.

ಮಂದಾನ 32 ಎಸೆತಗಳಲ್ಲಿ ಔಟಾಗದೇ 47 ರನ್ (4x9) ಗಳಿಸಿದ್ದು, ಮೊದಲ ವಿಕೆಟ್ಗೆ ಇವರಿಬ್ಬರು 137 ರನ್ ಸೇರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದಕ್ಕೆ ಮೊದಲು, ಫೀಲ್ಡಿಂಗ್ ಮಾಡುವ ತಮ್ಮ ನಾಯಕಿಯ ನಿರ್ಧಾರವನ್ನು ಸಮರ್ಥಿಸುವಂತೆ ಆರ್ಸಿಬಿ ಬೌಲರ್ಗಳು ಪರಿಣಾಮಕಾರಿ ದಾಳಿ ನಡೆಸಿದರು.

ವಾರಿಯರ್ಸ್ ತಂಡವು ಪವರ್ಪ್ಲೇ ಅವಧಿಯಲ್ಲಿ 1 ವಿಕೆಟ್ಗೆ 36 ರನ್ ಗಳಿಸಿತ್ತು. ನಂತರ ಕುಸಿದು ಒಂಬತ್ತನೇ ಓವರಿನಲ್ಲಿ 50 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ, ಆಲ್ರೌಂಡರ್ ಗಳಾದ ದೀಪ್ತಿ ಶರ್ಮಾ (ಅಜೇಯ 45) ಮತ್ತು ಡಿಯಾಂಡ್ರ ಡಾಟಿನ್ (ಅಜೇಯ 40) ಅವರ ಉಪಯುಕ್ತ ಆಟದಿಂದ ತಂಡವು 5 ವಿಕೆಟ್ಗೆ 143 ರನ್ಗಳ ಗೌರವದ ಮೊತ್ತ ಗಳಿಸಿತು.

ವೆಸ್ಟ್ ಇಂಡೀಸ್ ಆಟಗಾರ್ತಿ ಡಾಟಿನ್ ಮತ್ತು ದೀಪ್ತಿ 93 ರನ್ಗಳ ಜೊತೆಯಾಟದಲ್ಲಿ ಭಾಗಿಯಾಗಿ ತಂಡಕ್ಕೆ ಆಸರೆಯಾದರು. ಅನುಭವಿ ದೀಪ್ತಿ 35 ಎಸೆತಗಳಲ್ಲಿ ಒಂದು ಸಿಕ್ಸರ್, ಐದು ಬೌಂಡರಿಗಳನ್ನು ಬಾರಿಸಿದರು. ಡಾಟಿನ್ 37 ಎಸೆತಗಳಲ್ಲಿ ಒಂದು ಸಿಕ್ಸರ್, ಮೂರು ಬೌಂಡರಿಗಳನ್ನು ಹೊಡೆದರು.

ಶ್ರೇಯಾಂಕಾ ಮಾಡಿದ ಕೊನೆಯ ಓವರಿನಲ್ಲಿ ಇವರಿಬ್ಬರು 15 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರುಗಳು:

ಯುಪಿ ವಾರಿಯರ್ಸ್: 20 ಓವರುಗಳಲ್ಲಿ 5 ವಿಕೆಟ್ಗೆ 143 (ಫೋಬಿ ಲಿಚ್ಫೀಲ್ಡ್ 20, ದೀಪ್ತಿ ಶರ್ಮಾ ಔಟಾಗದೇ 45, ಡಿಯಾಂಡ್ರ ಡಾಟಿನ್ ಔಟಾಗದೇ 40; ಶ್ರೇಯಾಂಕಾ ಪಾಟೀಲ 50ಕ್ಕೆ2, ನದೀನ್ ಡಿ ಕ್ಲರ್ಕ್ 28ಕ್ಕೆ2);

ಆರ್ಸಿಬಿ: 12.1 ಓವರುಗಳಲ್ಲಿ 1 ವಿಕೆಟ್ಗೆ 145 (ಗ್ರೇಸ್ ಹ್ಯಾರಿಸ್ 85, ಸ್ಮೃತಿ ಮಂದಾನ ಔಟಾಗದೇ 47).

ಪಂದ್ಯದ ಆಟಗಾರ್ತಿ: ಗ್ರೇಸ್ ಹ್ಯಾರಿಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.