ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಕ್ಸ್‌’ನಲ್ಲಿ ತಾಂತ್ರಿಕ ದೋಷ: ಹಲವು ಬಳಕೆದಾರರಿಂದ ದೂರು

Published 19 ಅಕ್ಟೋಬರ್ 2023, 10:39 IST
Last Updated 19 ಅಕ್ಟೋಬರ್ 2023, 10:39 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರಿಯ ಮೈಕ್ರೋ ಬ್ಲಾಗಿಂಗ್ ಜಾಲತಾಣ ಎಕ್ಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಟ್ವಿಟರ್ ಸ್ಪಂದಿಸುತ್ತಿಲ್ಲ ಎಂದು ಹಲವು ಬಳಕೆದಾರರು ವರದಿ ಮಾಡಿದ್ದಾರೆ.

ವೆಬ್‌ಸೈಟ್‌ಗಳು ಸ್ಥಗಿತಗೊಳ್ಳುವ ಸಮಸ್ಯೆಗಳನ್ನು ಟ್ರ್ಯಾಕ್ ಮಾಡುವ ಡೌನ್‌ಡಿಟೆಕ್ಟರ್, ಗುರುವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಎಕ್ಸ್‌ ವೇದಿಕೆಯ ದೋಷದ ಬಗ್ಗೆ ಬಳಕೆದಾರರ ದೂರುಗಳು ಹೆಚ್ಚಾಗಿವೆ ಎಂದು ತಿಳಿಸಿದೆ.

ವರದಿಗಳ ಪ್ರಕಾರ, ಕಳೆದ 24 ಗಂಟೆಗಳಿಂದಲೂ ಎಕ್ಸ್‌ನಲ್ಲಿ ದೋಷ ಕಂಡುಬಂದಿದೆ.

Venugopala K.
Venugopala K.

ಎಕ್ಸ್ ಖಾತೆಯು ಇಂದು ಮಧ್ಯಾಹ್ನ ಡೌನ್ ಆಗಿರುವ ಬಗ್ಗೆ ಅತಿ ಹೆಚ್ಚು ಬಳಕೆದಾರರು ವರದಿ ಮಾಡಿರುವುದನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. ಸ್ವಲ್ಪ ಸಮಯದ ಬಳಿಕ ಸಮಸ್ಯೆ ನಿವಾರಣೆಯಾಗಿದೆ ಎಂದೂ ಬಳಕೆದಾರರು ತಿಳಿಸಿದ್ದಾರೆ.

ಎಕ್ಸ್ ಖಾತೆಯ ಬೇಸಿಕ್ ಫೀಚರ್‌ಗಳನ್ನು ಪಡೆಯಲು ಟ್ವಿಟರ್ ಬಳಕೆದಾರರಿಗೆ 1 ಡಾಲರ್ ಶುಲ್ಕ ವಿಧಿಸುವ ಕುರಿತಂತೆ ಎಲಾನ್ ಮಸ್ಕ್ ಒಡೆತನದ ಸಂಸ್ಥೆಯು ಯೋಜಿಸುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಸಮಸ್ಯೆ ಕಂಡುಬಂದಿದೆ.

ಈ ಹೊಸ ಚಂದಾದಾರಿಕೆಗೆ ‘ನಾಟ್ ಎ ಬಾಟ್’ ಎಂದು ಹೆಸರಿಡಲಾಗಿದ್ದು, ಬಳಕೆದಾರರು ವೆಬ್ ಆವೃತ್ತಿಯ ಎಕ್ಸ್‌ನಲ್ಲಿ ಲೈಕ್ಸ್, ರಿಪೋಸ್ಟ್ಸ್, ಬುಕ್‌ಮಾರ್ಕಿಂಗ್ ಪೋಸ್ಟ್‌ಗೆ ವರ್ಷಕ್ಕೆ 1 ಡಾಲರ್ ಪಾವತಿಸಬೇಕಿದೆ.

ಸ್ಪ್ಯಾಮರ್‌ಗಳು ಮತ್ತು ಬಾಟ್‌ಗಳನ್ನು ನಿರ್ವಹಿಸುವ ಉದ್ದೇಶದಿಂದ ಈ ಚಂದಾದಾರಿಕೆ ಮಾದರಿಯನ್ನು ಸೇರಿಸಲಾಗಿದೆ. ಅಂತರರಾಷ್ಟ್ರೀಯ ವಿನಿಮಯ ದರದ ಆಧಾರದ ಮೇಲೆ ವಿವಿಧ ದೇಶಗಳಲ್ಲಿ ದರ ಭಿನ್ನವಾಗಿರುತ್ತದೆ ಎಂದು ಎಕ್ಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT