ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024ಕ್ಕೆ ಮಾರುಕಟ್ಟೆಗೆ ದೇಶದಲ್ಲಿ ತಯಾರಾದ ‘ಗೂಗಲ್ ಪಿಕ್ಸಲ್‌ 8’ ಸ್ಮಾರ್ಟ್‌ಫೋನ್

Published 19 ಅಕ್ಟೋಬರ್ 2023, 11:02 IST
Last Updated 19 ಅಕ್ಟೋಬರ್ 2023, 11:02 IST
ಅಕ್ಷರ ಗಾತ್ರ

ನವದೆಹಲಿ: ‘ಗೂಗಲ್‌ ಕಂಪನಿಯು ಭಾರತದಲ್ಲಿಯೇ ಸ್ಮಾರ್ಟ್‌ಫೋನ್ ತಯಾರಿಕೆ ಆರಂಭಿಸಲಿದೆ. ಮೊದಲಿಗೆ ಪಿಕ್ಸಲ್‌ 8 ಸ್ಮಾರ್ಟ್‌ಫೋನ್‌ ತಯಾರಿಸಲಿದ್ದು, ಮುಂದಿನ ವರ್ಷ ಅದು ಮಾರುಕಟ್ಟೆಗೆ ಬರಲಿದೆ’ ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷ ರಿಕ್‌ ಆಸ್ಟರ್ಲೋ ತಿಳಿಸಿದ್ದಾರೆ.

‘ಗೂಗಲ್‌ ಫಾರ್‌ ಇಂಡಿಯಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲು ಜಾಗತಿಕ ಮತ್ತು ದೇಶಿ ತಯಾರಕರೊಂದಿಗೆ ಕಂಪನಿಯು ಪಾಲುದಾರಿಕೆ ಮಾಡಿಕೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.

‘ಪಿಕ್ಸೆಲ್‌ ಸ್ಮಾರ್ಟ್‌ಫೋನ್‌ಗಳಿಗೆ ಭಾರತವು ಆದ್ಯತೆಯ ಮಾರುಕಟ್ಟೆ ಆಗಿದೆ. ದೇಶದ ಜನರಿಗೆ ಉತ್ತಮ ಹಾರ್ಡ್‌ವೇರ್‌ ಮತ್ತು ಬಿಲ್ಟ್‌ ಇನ್‌ ಸಾಫ್ಟ್‌ವೇರ್ ನೀಡಲು ನಾವು ಬದ್ಧ’ ಎಂದು ರಿಕ್‌ ತಿಳಿಸಿದ್ದಾರೆ.

ತಯಾರಿಕಾ ಘಟಕ ಎಲ್ಲಿರಲಿದೆ ಅಥವಾ ಎಷ್ಟು ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಲಾಗುವುದು ಎನ್ನುವ ಮಾಹಿತಿಯನ್ನು ಕಂಪನಿಯು ತಕ್ಷಣಕ್ಕೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT