ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ಸಸ್ಯಾಹಾರ ಸೇವೆ ಆರಂಭಿಸಿದ ಜೊಮಾಟೊ

Published 19 ಮಾರ್ಚ್ 2024, 16:09 IST
Last Updated 19 ಮಾರ್ಚ್ 2024, 16:09 IST
ಅಕ್ಷರ ಗಾತ್ರ

ನವದೆಹಲಿ: ಸಸ್ಯಾಹಾರ ಸೇವಿಸುವ ಗ್ರಾಹಕರ ಮನೆ ಬಾಗಿಲಿಗೆ ಜೊಮಾಟೊ ಕಂಪನಿಯು, ಶುದ್ಧ ಸಸ್ಯಾಹಾರ ಪೂರೈಸುವ ಸೇವೆ ಆರಂಭಿಸಿದೆ. 

ಸಸ್ಯಾಹಾರಿಗಳಿಗೆ ಅನುಕೂಲ ಕಲ್ಪಿಸಲು ಈ ಸೇವೆ ಆರಂಭಿಸಲಾಗಿದೆ. ಶೇ 100ರಷ್ಟು ಸಸ್ಯಾಹಾರ ಪೂರೈಸಲಾಗುತ್ತದೆ. ಇದಕ್ಕಾಗಿ ‘ಫ್ಯೂರ್‌ ವೆಜ್‌ ಫ್ಲೀಟ್‌’ ಹಾಗೂ ‘ಫ್ಯೂರ್‌ ವೆಜ್ ಮೋಡ್‌’ ಸೇವೆಗೆ ಚಾಲನೆ ನೀಡಲಾಗಿದೆ ಎಂದು ಜೊಮಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅವರು, ಮಂಗಳವಾರ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. 

ಭಾರತದಲ್ಲಿ ಜಗತ್ತಿನಲ್ಲಿಯೇ ಅತಿಹೆಚ್ಚು ಸಸ್ಯಾಹಾರಿಗಳಿದ್ದಾರೆ. ಅವರೆಲ್ಲರಿಗೂ ತಮ್ಮ ಆಹಾರವನ್ನು ಹೇಗೆ ಬೇಯಿಸಲಾಗುತ್ತದೆ ಹಾಗೂ ಅದನ್ನು ಹೇಗೆ ನಿರ್ವಹಣೆ ಮಾಡಲಾಗುತ್ತದೆ ಎಂಬ ಬಗ್ಗೆ ಕುತೂಹಲ ಇರುತ್ತದೆ. ಇದಕ್ಕೆ ಪೂರಕವಾಗಿಯೇ ಈ ಸೇವೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.  

ಫ್ಯೂರ್‌ ವೆಜ್‌ ಮೋಡ್‌ನಲ್ಲಿ ಸಸ್ಯಾಹಾರ ತಯಾರಿಸುವ ರೆಸ್ಟೊರೆಂಟ್‌ಗಳ ಪಟ್ಟಿ ಮಾತ್ರ ಇರುತ್ತದೆ. ಮಾಂಸಾಹಾರ ಪೂರೈಸುವ ರೆಸ್ಟೊರೆಂಟ್‌ಗಳು ಈ ಪಟ್ಟಿಯಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಸ್ಯಾಹಾರ ವಿತರಣೆಗೆ ಕೆಂಪು ಬಣ್ಣದ ಬದಲಾಗಿ ಹಸಿರು ಬಣ್ಣದ ಬಾಕ್ಸ್‌ಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT