ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರಿನಲ್ಲಿ 1 ಡಿಗ್ರಿಯಷ್ಟು ತಾಪಮಾನ ಏರಿಕೆ; ಸಾಧಾರಣ ಮಳೆ: ಹವಾಮಾನ ಇಲಾಖೆ

Published 28 ಮೇ 2024, 4:31 IST
Last Updated 28 ಮೇ 2024, 4:31 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಐದು ದಿನಗಳಲ್ಲಿ ಬೆಂಗಳೂರಿನಲ್ಲಿ ತಾಪಮಾನ 1 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಲಿದೆ.  ಆದರೆ ಮೇ 30ರವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿರುವ ರೀಮಲ್‌ ಚಂಡಮಾರುತದ ಪ್ರಭಾವ ಬೆಂಗಳೂರಿನ ಹವಾಮಾನದ ಮೇಲೆ ಪರಿಣಾಮ ಬೀರದು ಎಂದು ಐಎಂಡಿ ವಿಜ್ಞಾನಿಯೊಬ್ಬರು ಡೆಕ್ಕನ್‌ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ನಗರದಲ್ಲಿ ಗರಿಷ್ಠ 33 ರಿಂದ 34 ಹಾಗೂ ಕನಿಷ್ಠ 23 ರಿಂದ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ.

ಮುಂದಿನ ನಾಲ್ಕು ದಿನಗಳವರೆಗೆ ತಾಪಮಾನದ ಏರಿಳಿತ ಮತ್ತು ಲಘುವಾದ ಗುಡುಗು ಸಹಿತ ಮಳೆಯು ಕೇರಳ ಕರಾವಳಿಯಲ್ಲಿನ ಮುಂಗಾರಿನ ಅನುಪಸ್ಥಿತಿಯ ಪರಿಣಾಮವಾಗಿದೆ. ಆದರೆ, ನೈರುತ್ಯ ಮುಂಗಾರು ಜೂನ್ ವೇಳೆಗೆ ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT