ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೊಂಡಾ | ಮೊಹರಂ: ಪ್ರತ್ಯೇಕ ಅವಘಡ; ಬಾಲಕ ಸಾವು, 19 ಮಂದಿಗೆ ಗಾಯ

Published : 17 ಜುಲೈ 2024, 15:15 IST
Last Updated : 17 ಜುಲೈ 2024, 15:15 IST
ಫಾಲೋ ಮಾಡಿ
Comments

ಗೊಂಡಾ: ಗೊಂಡಾದಲ್ಲಿ ತಾಜಿಯಾ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ 12 ವರ್ಷದ ಮಗು ಬುಧವಾರ ಮೃತಪಟ್ಟಿದ್ದು, ಪ್ರತ್ಯೇಕ ವಿದ್ಯುತ್ ಅವಘಡಗಳಲ್ಲಿ  19 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾರಾಬ್‌ಗಂಜ್ ಪ್ರದೇಶದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ತಾಜಿಯಾ ಮೆರವಣಿಗೆ ಹೊರಟಿತು. ಹೈ–ಟೆನ್ಷನ್ ತಂತಿಗೆ ತಾಜಿಯಾ ತಗುಲಿದ್ದರಿಂದ ಅಶ್ರಫ್ (12) ಮತ್ತು ರಿಯಾಸತ್ ಅವರಿಗೆ ಸುಟ್ಟ ಗಾಯಗಳಾಗಿವೆ.

ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಅಶ್ರಫ್ ಮೃತಪಟ್ಟಿದ್ದಾರೆ ಮತ್ತು ರಿಯಾಸತ್ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ಇತಿಯಾ ಥೋಕ್ ಪ್ರದೇಶದ ತೆಲಿಯನ ಪುರವಾ ಗ್ರಾಮದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ತಾಜಿಯಾ ವಿದ್ಯುತ್ ಲೈನ್‌ಗೆ ತಗುಲಿದ ಕಾರಣ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಬಾಬು, ಅಕ್ರಮ್, ಗಯಾ ಪ್ರಸಾದ್ ಮತ್ತು ಮುನ್ನಿ ದೇವಿ ಎಂದು ಗುರುತಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

ವಿದ್ಯುತ್ ಸ್ಪರ್ಶ: 14 ಮಂದಿ ಗಾಯ

ಅರಾರಿಯಾ: ಬಿಹಾರದ ಅರಾರಿಯಾ ಜಿಲ್ಲೆಯ ಪಿಪ್ರಾ ಬಿಜ್ವಾರಾ ಪ್ರದೇಶದಲ್ಲಿ ಬುಧವಾರ ನಡೆದ ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ತಗುಲಿ ಕನಿಷ್ಠ 14 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೆರವಣಿಗೆಯು ತೆರೆದ ಮೈದಾನದ ಮೂಲಕ ಹಾದು ಹೋಗುತ್ತಿದ್ದಾಗ ತಾಜಿಯಾದ ಒಂದು ಭಾಗವು ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿತು. ಗಾಯಗೊಂಡವರೆಲ್ಲರೂ ಮೆರವಣಿಗೆಯ ಭಾಗವಾಗಿದ್ದರು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT