ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅದಾನಿ ಸಮೂಹಕ್ಕೆ ಧಾರಾವಿ ಅಭಿವೃದ್ಧಿ ಹೊಣೆ: ಕಾಂಗ್ರೆಸ್‌ ತರಾಟೆ

Published : 17 ಡಿಸೆಂಬರ್ 2023, 15:47 IST
Last Updated : 17 ಡಿಸೆಂಬರ್ 2023, 15:47 IST
ಫಾಲೋ ಮಾಡಿ
Comments

ನವದೆಹಲಿ: ಮುಂಬೈನ ಧಾರಾವಿಯ ಮರು ಅಭಿವೃದ್ಧಿ ಯೋಜನೆಯನ್ನು ಅದಾನಿ ಸಮೂಹಕ್ಕೆ ಒಪ್ಪಿಸಿರುವರ ರಾಜ್ಯ ಸರ್ಕಾರದ ನಿಲುವನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿವೆ.‘ಆಧುನಿಕ ಭಾರತದಲ್ಲಿ ಅತಿದೊಡ್ಡ ಲೂಟಿ ಮುಂದುವರಿದಿದೆ’ ಎಂದೂ ಕಾಂಗ್ರೆಸ್‌ ಆರೋಪಿಸಿದೆ.

ಜನರಿಗೆ ಹೊರೆಯಾಗುವಂತೆ ಅದಾನಿ ಸಮೂಹ ಹೇಗೆ ಇನ್ನಷ್ಟು ಶ್ರೀಮಂತವಾಗುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಕಾಂಗ್ರೆಸ್‌ ಪಕ್ಷ ಟೀಕಿಸಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಪಕ್ಷ ಶನಿವಾರವಷ್ಟೇ ಪ್ರತಿಭಟನೆಯನ್ನೂ ನಡೆಸಿತ್ತು. 

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು, ‘ಇದು, ಅಭಿವೃದ್ಧಿ ಹಕ್ಕುಗಳನ್ನು ವರ್ಗಾಯಿಸುವ ವಿಶ್ವದ ಅತಿದೊಡ್ಡ ಹಗರಣ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು, ‘ಮೊದಾನಿ ಮೆಘಾ ಹಗರಣ’ದ ವಿಶೇಷವೆಂದರೆ, ತಮ್ಮ ಆತ್ಮೀಯ ಸ್ನೇಹಿತರ ಕಡೆಗೆ ಕೋಟ್ಯಂತರ ರೂಪಾಯಿ ಹರಿದುಬರುವಂತೆ ಪ್ರಧಾನಿ ನರೇಂದ್ರ ಮೋದಿಯವರಷ್ಟೇ ವ್ಯವಸ್ಥೆ ಮಾಡುತ್ತಿಲ್ಲ. ಹಣವು ಈಗ ಸಾಮಾನ್ಯ ಜನರ ಜೇಬಿನಿಂದಲೇ ನೇರವಾಗಿ ಹರಿದುಬರುವಂತೆ ಕ್ರಮವಹಿಸಲಾಗಿದದೆ’ ಎಂದು ಟೀಕಿಸಿದ್ದಾರೆ. 

‘ಧಾರಾವಿ ಮರು ಅಭಿವೃದ್ಧಿ ಯೋಜನೆಯ ನಿಜವಾದ ಫಲಾನುಭವಿ ಮುಂಬೈ ಅಥವಾ ಧಾರಾವಿಯ ಜನರಲ್ಲ. ಬದಲಾಗಿ, ಪ್ರಧಾನಿಯವರ ಆತ್ಮೀಯ ಸ್ನೇಹಿತ. ಇದಕ್ಕೆ ದೇವೇಂದ್ರ ಫಡಣವೀಸ್ ನೆರವಾಗುತ್ತಿದ್ದಾರೆ’ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರದಿಂದ ಅದಾನಿ ಸಮೂಹವು ಹೆಚ್ಚಿನ ನೆರವು ಪಡೆಯುತ್ತಿದೆ. ಷೇರುಮೌಲ್ಯಗಳ ಏರಿಳಿತ ಕುರಿತಂತೆ ಹಿಂಡನ್‌ಬರ್ಗ್‌ನ ವರದಿ ಕುರಿತಂತೆ ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕ ಎಂದು ಕಾಂಗ್ರೆಸ್ ಈಗಾಗಲೇ ಒತ್ತಾಯಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT