ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ಉದ್ಘಾಟನೆಗೆ ಯಾರೇ ಹೋದರೂ ಕೇರಳ ಮುಸ್ಲಿಮರ ಭಾವನೆಗೆ ಧಕ್ಕೆ ಇಲ್ಲ: ಉಲೆಮಾ

Published 30 ಡಿಸೆಂಬರ್ 2023, 15:53 IST
Last Updated 30 ಡಿಸೆಂಬರ್ 2023, 15:53 IST
ಅಕ್ಷರ ಗಾತ್ರ

ತಿರುವನಂತಪುರ: ‘ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಯಾರೇ ಭಾಗವಹಿಸಿದರೂ ಕೇರಳ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ’ ಎಂದು ಸುನ್ನಿ ವಿದ್ವಾಂಸರ ಸಂಘ ಸಮಸ್ತ ಕೇರಳ ಜೆಮ್-ಇಯ್ಯತ್‌ಉಲ್ ಉಲೆಮಾ ಶನಿವಾರ ಸ್ಪಷ್ಟಪಡಿಸಿದೆ.

ಜನವರಿ 22 ರಂದು ನಡೆಯುವ ಸಮಾರಂಭದ ಆಹ್ವಾನ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, ಸಮಸ್ತದ ಮುಖವಾಣಿ ‘ಸುಪ್ರಭಾತಂ’ ಸಂಪಾದಕೀಯದಲ್ಲಿ ‘ಕಾಂಗ್ರೆಸ್ ಮೃದು ಹಿಂದುತ್ವ ಧೋರಣೆ ಹೊಂದಿದೆ’ ಎಂದು ಆರೋಪಿಸಲಾಗಿದೆ. ಈ ಸಂಪಾದಕೀಯದ ಬಗ್ಗೆ ರಾಜ್ಯದಲ್ಲಿ ಎದ್ದಿರುವ ಕೋಲಾಹಲದ ಬೆನ್ನಲ್ಲೇ ಸಮಸ್ತ ಈ ಸ್ಪಷ್ಟನೆಯನ್ನು ನೀಡಿದೆ.

ಕೋಯಿಕ್ಕೋಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಸ್ತದ ಮುಖ್ಯಸ್ಥ ಜಿಫ್ರಿ ಮುತ್ತುಕೋಯ ತಂಗಲ್, ‘ಪ್ರತಿ ರಾಜಕೀಯ ಪಕ್ಷವು ಅವರ ರಾಜಕೀಯ ನೀತಿಗೆ ಅನುಗುಣವಾಗಿ ಆಹ್ವಾನವನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು. ರಾಮಮಂದಿರ ಉದ್ಘಾಟನೆಯಲ್ಲಿ ಯಾರು ಭಾಗವಹಿಸಿದರೂ ಅದು ಕಾಂಗ್ರೆಸ್ ಆಗಿದ್ದರೂ ಸಹ ಸಮುದಾಯದ ಭಾವನೆಗಳಿಗೆ ಯಾವುದೇ ಧಕ್ಕೆಯಾಗದು. ನಾವು ನಮ್ಮ ಸಮುದಾಯದ ಭಾವನೆಗಳ ಬಗ್ಗೆ ಕಾಳಜಿ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT