ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಖಾಲಿಸ್ತಾನಿ ಬೆಂಬಲಿಗರಿಂದ ಭಾರತದ ರಾಯಭಾರಿ ಸಂಧುಗೆ ಅಡ್ಡಿ

Published 27 ನವೆಂಬರ್ 2023, 13:54 IST
Last Updated 27 ನವೆಂಬರ್ 2023, 13:54 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಗುರುನಾನಕ್‌ ಜಯಂತಿ ಅಂಗವಾಗಿ ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ನ್ಯೂಯಾರ್ಕ್‌ನಲ್ಲಿರುವ ಗುರುದ್ವಾರಕ್ಕೆ ತೆರಳಿದ್ದ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಂಜಿತ್‌ ಸಿಂಗ್‌ ಸಂಧು ಅವರಿಗೆ ಖಾಲಿಸ್ತಾನ ಬೆಂಬಲಿಗರ ಗುಂಪೊಂದು ಅಡ್ಡಿಪಡಿಸಿದೆ.

ಇಲ್ಲಿನ ಹಿಕ್ಸ್‌ವಿಲ್ಲೆ ಗುರುದ್ವಾರದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಸಂಧು ಅವರು ಗುರುದ್ವಾರಕ್ಕೆ ಭೇಟಿ ನೀಡಿದ್ದ ವೇಳೆ ಅವರಿಗೆ ಅಡ್ಡಿಪಡಿಸಿದ ಖಾಲಿಸ್ತಾನ ಬೆಂಬಲಿಗರು, ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಕುರಿತು ಪ್ರಶ್ನೆಗಳನ್ನು ಕೂಗುತ್ತಿದ್ದ ದೃಶ್ಯಗಳು ವಿಡಿಯೊದಲ್ಲಿವೆ.

ಸಿಖ್‌ ಸಮುದಾಯದವರ ಬೆಂಗಾವಲಿನಲ್ಲಿ ಸಂಧು ನಿರ್ಗಮಿಸಿದ್ದಾರೆ. ನಂತರ ಮಾತನಾಡಿದ ಅವರು, ಅಮೆರಿಕದಲ್ಲಿ ನೆಲೆಸಿರುವ ಸಿಖ್‌ ಸಮುದಾಯಕ್ಕೆ ಭಾರತೀಯ ರಾಯಭಾರಿಗಳು ಎಲ್ಲ ರೀತಿಯ ನೆರವು ಒದಗಿಸುವರು ಎಂದರು.

ಇದಕ್ಕೂ ಮುನ್ನ ಸಂಧು ಪ್ರಾರ್ಥನೆ ಸಲ್ಲಿಸಿದರು. ನಂತರ, ‘ಗುರುನಾನಕ್‌ ದರ್ಬಾರದಲ್ಲಿ ನಡೆದ ಸತ್ಸಂಗದಲ್ಲಿ ಅಫ್ಗಾನಿಸ್ತಾನ ಪ್ರಜೆಗಳೊಂದಿಗೆ ಪಾಲ್ಗೊಂಡು, ಕೀರ್ತನೆಗಳನ್ನು ಆಲಿಸಲು ಅವಕಾಶ ಲಭಿಸಿದ್ದು ನನ್ನ ಭಾಗ್ಯ. ಗುರುನಾನಕ್‌ ಅವರು ಸಾರಿದ ಏಕತೆ, ಸಮಾನತೆ ಕುರಿತು ಮಾತನಾಡಿದೆ’ ಎಂದು ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ಕಾನ್ಸುಲ್‌ ಜನರಲ್ ರಣಧೀರ ಜೈಸ್ವಾಲ್, ಡೆಪ್ಯುಟಿ ಕಾನ್ಸುಲ್‌ ಜನರಲ್ ವರುಣ್ ಜೆಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT