ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ICC World Cup 2023 | ಬಲವಾದ ಗಾಳಿ: ಕಳಚಿ ಬಿದ್ದ ಏಕನಾ ಕ್ರೀಡಾಂಗಣದ ಹೋರ್ಡಿಂಗ್‌

Published 16 ಅಕ್ಟೋಬರ್ 2023, 16:20 IST
Last Updated 16 ಅಕ್ಟೋಬರ್ 2023, 16:20 IST
ಅಕ್ಷರ ಗಾತ್ರ

ಲಖನೌ: ಆಸ್ಟ್ರೇಲಿಯಾ– ಶ್ರೀಲಂಕಾ ನಡುವಣ ಪಂದ್ಯ ನಡೆದ ಏಕನಾ ಕ್ರೀಡಾಂಗಣದ ಚಾವಣಿಗೆ ಕಟ್ಟಿದ್ದ ಹಲವು ಹೋರ್ಡಿಂಗ್‌ಗಳು ಬಲವಾಗಿ ಬೀಸಿದ ಗಾಳಿಗೆ ಕಳಚಿ ಬಿದ್ದಿವೆ. ಇದರಿಂದ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣವಾಯಿತು.

ಶ್ರೀಲಂಕಾ ತಂಡದ ಇನಿಂಗ್ಸ್ ವೇಳೆ ಮಳೆಯಿಂದಾಗಿ ಕೆಲಹೊತ್ತು ಆಟ ಸ್ಥಗಿತಗೊಂಡಿತು. ಈ ವೇಳೆ ಬಲವಾದ ಗಾಳಿ ಬೀಸಿದೆ. ಜಾಹೀರಾತು ಹೋರ್ಡಿಂಗ್‌ಗಳು ಪ್ರೇಕ್ಷಕರು ಕುಳಿತುಕೊಳ್ಳುವ ಆಸನಗಳ ಮೇಲೆ ಬಿದ್ದಿವೆ. ಅದೃಷ್ಟವಶಾತ್ ಹೋರ್ಡಿಂಗ್‌ ಬಿದ್ದ ಜಾಗದಲ್ಲಿ ಪ್ರೇಕ್ಷಕರು ಇರಲಿಲ್ಲ.

ಮುನ್ನೆಚ್ಚರಿಕೆ ಕ್ರಮವಾಗಿ ಗ್ಯಾಲರಿಯ ಹಿಂದಿನ ಸಾಲುಗಳ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಪ್ರೇಕ್ಷಕರಿಗೆ ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT