ಭಾನುವಾರ, ಮೇ 9, 2021
19 °C

ಅಟಲ್‌ ಸುರಂಗದಲ್ಲಿ ನೃತ್ಯ: 10 ಪ್ರವಾಸಿಗರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶಿಮ್ಲಾ: ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಅಟಲ್‌ ಹೆಸರಿನ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗದೊಳಗೆ ವಾಹನ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ ಕಾರಣಕ್ಕಾಗಿ, ಹಿಮಾಚಲ ಪ್ರದೇಶ ಪೊಲೀಸರು 10 ಪ್ರವಾಸಿಗರನ್ನು ಬಂಧಿಸಿ, ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಗುರುವಾರ ಸುರಂಗದೊಳಗೆ ವಾಹನ ನಿಲ್ಲಿಸಿ, ಹಾಡು ಹಾಕಿ ನೃತ್ಯ ಮಾಡಿದ್ದರು. ಇದರಿಂದಾಗಿ ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಪ್ರವಾಸಿಗರೆಲ್ಲರೂ ದೆಹಲಿಯವರಾಗಿದ್ದು, 20–30 ವಯಸ್ಸಿನವರಾಗಿದ್ದಾರೆ ಎಂದು ಕುಲು ಎಸ್‌.ಪಿ ಗೌರವ್‌ ಸಿಂಗ್‌ ಹೇಳಿದರು. ಉದ್ಘಾಟನೆಗೊಂಡ ಬಳಿಕ, ಪ್ರವಾಸಿ ತಾಣವಾಗಿರುವ ಈ ಸುರಂಗ ಮಾರ್ಗವು ನಿತ್ಯ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ.

ಇದನ್ನೂ ಓದಿ: ಜಗತ್ತಿನ ಅತೀ ಉದ್ದದ ಅಟಲ್ ಸುರಂಗ ಮಾರ್ಗದ ವಿಶೇಷತೆ ಏನು?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು