ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ–ಅಹಮದಾಬಾದ್‌ ಹೆದ್ದಾರಿಯಲ್ಲಿ ಈ ವರ್ಷ ಅಪಘಾತದಲ್ಲಿ 62 ಸಾವು

ಇದೇ ಹೆದ್ದಾರಿಯಲ್ಲಿ ಸೆ.4 ರಂದು ಸೈರಸ್‌ ಮಿಸ್ತ್ರಿ ಅವರು ಅಪಘಾತದಲ್ಲಿ ಮೃತಪಟ್ಟಿದ್ದರು
Last Updated 18 ಸೆಪ್ಟೆಂಬರ್ 2022, 15:20 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ–ಅಹಮದಾಬಾದ್‌ ಹೆದ್ದಾರಿಯಲ್ಲಿ ಮುಂಬೈನ ತಾಣೆಯ ಗೋಡ್‌ಬಂದರ್‌ನಿಂದ ಪಾಲ್ಘರ್‌ ಜಿಲ್ಲೆಯ ದಾಪ್‌ಚರಿ ವರೆಗಿನ 100 ಕಿ.ಮೀ ವ್ಯಾಪ್ತಿಯಲ್ಲಿ ಈ ವರ್ಷ ಒಟ್ಟು 262 ಅಪಘಾತಗಳ ಸಂಭವಿಸಿವೆ. ಇದರಲ್ಲಿ 62 ಮಂದಿ ಮೃತಪಟ್ಟಿದ್ದಾರೆ ಮತ್ತು 192 ಮಂದಿ ಗಾಯಗೊಂಡಿದ್ದಾರೆ. ಇದೇ ವಾಪ್ತಿಯಲ್ಲಿಯೇ ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಅವರ ಅಪಘಾವು ಸೆ.4ರಂದು ಸಂಭವಿಸಿತ್ತು.

‘ಮಿಸ್ತ್ರಿ ಅವರ ಅಪಘಾತ ಸಂಭವಿಸಿದ ಚರೋಟಿ ಪ್ರದೇಶದಲ್ಲಿ ಇದೇ ಜನವರಿಯಿಂದ ಇಲ್ಲಿಯ ವರೆಗೆ 25 ಭೀಕರ ಅಪಘಾತಗಳು ಸಂಭವಿಸಿದ್ದು, 26 ಮಂದಿ ಮೃತಪಟ್ಟಿದ್ದಾರೆ. ಆದ್ದರಿಂದ ಈ ಪ್ರದೇಶವನ್ನು ಬ್ಲ್ಯಾಕ್‌ ಸ್ಪಾಟ್‌ (ಅಪಘಾತ ಸಾಧ್ಯತೆ ಹೆಚ್ಚಿರುವ ಸ್ಥಳ) ಎನ್ನಲಾಗುತ್ತದೆ’ ಎಂದು ಮಹಾರಾಷ್ಟ್ರ ಹೆದ್ದಾರಿ ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

‘ಇಂಡಿಯನ್‌ ರೋಡ್‌ ಕಾಂಗ್ರೆಸ್‌ನ ಸುರಕ್ಷತಾ ಮಾರ್ಗಸೂಚಿಗಳನ್ನು ಈ ಹೆದ್ದಾರಿಯನ್ನು ನಿರ್ವಹಿಸುತ್ತಿರುವವರು ಪಾಲನೆ ಮಾಡಿಲ್ಲ. ಈ ಹೆದ್ದಾರಿಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿ ಬರುತ್ತದೆ. ಆದರೆ, ಟೋಲ್‌ಗಳನ್ನು ಸಂಗ್ರಹಿಸುವ ಖಾಸಗಿ ಕಂಪನಿಗಳ ಮೇಲೆಯೇ ಹೆದ್ದಾರಿ ನಿರ್ವಹಣೆ ಜವಾಬ್ದಾರಿ ಇರುತ್ತದೆ’ ಎಂದರು.

‘ಹೆದ್ದಾರಿಯ 30 ಕಿ.ಮೀ ಅಂತರಲ್ಲಿ ಆ್ಯಂಬುಲೆನ್ಸ್‌ ಸೇವೆ ಇಡಬೇಕು. ಜೊತೆಗೆ ಹೆದ್ದಾರಿಯುದ್ದಕ್ಕೂ ಗಸ್ತು ತಿರುಗುವ ವಾಹನಗಳೂ ಇರಬೇಕು ಎಂಬ ಮಾರ್ಗಸೂಚಿ ಇದೆ. ಆದರೆ ಇದರ ಪಾಲನೆ ಆಗುತ್ತಿಲ್ಲ’ ಎಂದರು.

ಮಿಸ್ತ್ರಿ ಅವರ ಅಪಘಾತದ ಬಳಿಕ, ಹೆದ್ದಾರಿಗಳಲ್ಲಿ ಯಾವ ಯಾವ ಸುರಕ್ಷಾ ಕ್ರಮಗಳನ್ನು ಪರಿಚಯಿಸಬೇಕು ಎಂದು ತಜ್ಞರ ಅಭಿಪ್ರಾಯವನ್ನು ಕೋರಿ ಮಹಾರಾಷ್ಟ್ರ ಪೊಲೀಸರು ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿರುವ ಹೆದ್ದಾರಿಗಳ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದೂ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಮಹಾರಾಷ್ಟ್ರ ಪೊಲೀಸರು ಕೇಳಿದ್ದಾರೆ.

ಅಪಘಾತಗಳಿಗೆ ಮುಖ್ಯ ಕಾರಣ

* ಅತಿ ವೇಗದ ಚಾಲನೆ

* ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಚಾಲಕರಿಂದಾಗುವ ತಪ್ಪು

* ರಸ್ತೆಗಳ ಕೆಟ್ಟ ನಿರ್ವಹಣೆ

* ರಸ್ತೆಯಲ್ಲಿ ಸೂಕ್ತ ಸೂಚನಾ ಫಲಕ ಇಲ್ಲದಿರುವುದು

* ವೇಗ ನಿಯಂತ್ರಣ ಕ್ರಮಗಳು ಇಲ್ಲದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT