ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ: ಆಮ್ಲಜನಕ ಪೂರೈಕೆ ವ್ಯತ್ಯಯ, 11 ಕೋವಿಡ್‌ ರೋಗಿಗಳ ಸಾವು

Last Updated 10 ಮೇ 2021, 20:56 IST
ಅಕ್ಷರ ಗಾತ್ರ

ತಿರುಪತಿ: ಇಲ್ಲಿನ ರುಯಾ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಆಮ್ಲಜನಕ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದಾಗಿ ತೀವ್ರನಿಗಾ ಘಟಕಕ್ಕೆ (ಐಸಿಯು)ದಾಖಲಾಗಿದ್ದ 11 ಮಂದಿ ಕೋವಿಡ್‌ ರೋಗಿಗಳು ಮೃತಪಟ್ಟಿದ್ದಾರೆ ಎಂದು ಚಿತ್ತೂರು ಜಿಲ್ಲಾಧಿಕಾರಿ ಎಂ. ಹರಿನಾರಾಯಣನ್‌ ತಿಳಿಸಿದ್ದಾರೆ.

ಆಮ್ಲಜನಕ ಸಿಲಿಂಡರ್ ಮರು ಜೋಡಿಸಲು ಐದು ನಿಮಿಷ ವಿಳಂಬವಾದ ಕಾರಣ ಈ ದುರ್ಘಟನೆ ನಡೆದಿದೆ ಎಂದು ಹೇಳಿದ್ದಾರೆ.

‘ಆಮ್ಲಜನಕ ಪೂರೈಕೆಯನ್ನು ಐದು ನಿಮಿಷಗಳೊಳಗೆ ಪುನಃಸ್ಥಾಪಿಸಲಾಗಿದೆ. ಸುಮಾರು 30 ವೈದ್ಯರು ಕೂಡಲೇ ಐಸಿಯುಗೆ ಧಾವಿಸಿ ರೋಗಿಗಳನ್ನು ಪರಿಚರಿಸಿದ್ದಾರೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇರಲಿಲ್ಲ.’ ಎಂದೂ ಅವರು ತಿಳಿಸಿದ್ದಾರೆ.

ಈ ಆಸ್ಪತ್ರೆಯ ಐಸಿಯು ಮತ್ತು ಆಮ್ಲಜನಕದ ವ್ಯವಸ್ಥೆಯಿರುವ ಹಾಸಿಗೆಗಳಲ್ಲಿ ಅಂದಾಜು 700 ಕೋವಿಡ್‌ ರೋಗಿಗಳು ಮತ್ತು ಸಾಮಾನ್ಯ ವಾರ್ಡ್‌ಗಳಲ್ಲಿ 300 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ, ಈ ಕುರಿತು ತನಿಖೆಗೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT