ಭಾನುವಾರ, ಮಾರ್ಚ್ 26, 2023
23 °C

ಲಖನೌ: ಶೈತ್ಯಾಗಾರ ಚಾವಣಿ ಕುಸಿತು 14 ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಸಂಭಲ್‌ ಜಿಲ್ಲೆಯ ಚಂದೌಸಿ ಪಟ್ಟಣದಲ್ಲಿರುವ ಶೈತ್ಯಾಗಾರದ ಚಾವಣಿ ಕುಸಿದ ಪರಿಣಾಮ 14 ಮಂದಿ ಮೃತಪಟ್ಟು, ಇತರ 11 ಜನರು ಗಾಯಗೊಂಡಿದ್ದಾರೆ.

ಮೃತರ ಪೈಕಿ ಬಹುತೇಕ ಜನರು ಕಾರ್ಮಿಕರಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರಂತ ಗುರುವಾರ ಸಂಜೆಯೇ ಸಂಭವಿಸಿದ್ದರೂ, ಅವಶೇಷಗಳಡಿಯಿಂದ ಮೃತದೇಹಗಳನ್ನು ಹಾಗೂ ಗಾಯಾಳುಗಳನ್ನು ಶುಕ್ರವಾರ ರಾತ್ರಿ ಹೊರತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‍ಪ್ರಕರಣಕ್ಕೆ ಸಂಬಂಧಿಸಿ ಶೈತ್ಯಾಗಾರದ ಮಾಲೀಕರಾದ ಅಂಕುರ್‌ ಅಗರವಾಲ್‌ ಹಾಗೂ ರೋಹಿತ್‌ ಅಗರವಾಲ್‌ ಎಂಬುವವರನ್ನು ಉತ್ತರಾಖಂಡದ ಹಲ್ದವಾನಿ ಪಟ್ಟಣದಲ್ಲಿ ಶನಿವಾರ ಬಂಧಿಸಿ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

‘25 ಜನರು ಆಲೂಗಡ್ಡೆ ಚೀಲಗಳನ್ನು ಶೈತ್ಯಾಗಾರದಲ್ಲಿ ಜೋಡಿಸಿಡುತ್ತಿದ್ದರು. ಈ ವೇಳೆ ಚಾವಣಿ ಹಠಾತ್ತನೇ ಕುಸಿಯಿತು. ಚಾವಣಿ ಅವಶೇಷಗಳಲ್ಲದೇ, ಆಲೂಗಡ್ಡೆ ಚೀಲಗಳು ಅವರ ಮೇಲೆ ಬಿದ್ದವು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು