ಶುಕ್ರವಾರ, ಆಗಸ್ಟ್ 12, 2022
20 °C

ಬಿಹಾರಕ್ಕೆ ಬಿಜೆಪಿ ಪ್ರಣಾಳಿಕೆ| ಪ್ರತಿಯೊಬ್ಬರಿಗೂ ಲಸಿಕೆ, 19 ಲಕ್ಷ ಮಂದಿಗೆ ನೌಕರಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಕೇಂದ್ರ ಹಣಕಾಸು ಸಚಿವೆ, ಬಿಜೆಪಿ ನಾಯಕಿ ನಿರ್ಮಲಾ ಸೀತಾರಾಮನ್‌ ಅವರು ಪಟ್ನಾದಲ್ಲಿ ಗುರುವಾರ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ ಮಾಡಿದರು.

ರಾಜ್ಯದ ಪ್ರತಿಯೊಬ್ಬರಿಗೂ ಉಚಿತ ಕೋವಿಡ್-19 ಲಸಿಕೆ ನೀಡುವ ಭರವಸೆಯನ್ನು ಬಿಜೆಪಿ ನೀಡಿದೆ. ಅಲ್ಲದೆ, ಬಿಹಾರದ 19 ಲಕ್ಷ ಜನರಿಗೆ ಉದ್ಯೋಗ ನೀಡುವ ಆಶ್ವಾಸನೆಯನ್ನೂ ಬಿಜೆಪಿ ಪ್ರಣಾಳಿಕೆ ಒಳಗೊಂಡಿದೆ.

‘ಬಿಹಾರವು ರಾಜಕೀಯವಾಗಿ ಸೂಕ್ಷ್ಮಮತಿಗಳನ್ನು ಮತ್ತು ಸುಶಿಕ್ಷಿತರನ್ನು ಒಳಗೊಂಡ ರಾಜ್ಯವಾಗಿದೆ. ಪಕ್ಷಗಳು ನೀಡುವ ನೀಡುವ ಭರವಸೆಗಳ ಬಗ್ಗೆ ಅವರಿಗೆ ಅರಿವಿರುತ್ತದೆ. ಅಲ್ಲದೆ, ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ನಾವು ನಮ್ಮ ಆಶ್ವಾಸನೆಗಳನ್ನು ಈಡೇರಿಸಿದ್ದೇವೆ. ಹೀಗಾಗಿ ನಮ್ಮ ಪ್ರಣಾಳಿಕೆ ಬಗ್ಗೆ ಯಾರಾದರೂ ಪ್ರಶ್ನೆಗಳನ್ನು ಎತ್ತಿದರೆ, ನಾವು ಅವರಿಗೆ ವಿಶ್ವಾಸದಿಂದ ಉತ್ತರ ನೀಡುತ್ತೇವೆ,’ ಎಂದು ನಿರ್ಮಲಾ ಸೀತಾರಾಮನ್‌ ಪ್ರಣಾಳಿಕೆ ಬಿಡುಗಡೆ ಮಾಡುತ್ತಾ ಹೇಳಿದರು.

ಎನ್‌ಡಿಎ ಅಧಿಕಾರವಧಿಯಲ್ಲಿ ಬಿಹಾರದ ಜಿಡಿಪಿ ತೀವ್ರಗತಿಯಲ್ಲಿ ಏರಿಕೆ ಕಂಡಿದೆ. ಕಳೆದ 15 ವರ್ಷಗಳಲ್ಲಿ ರಾಜ್ಯದ ಜಿಡಿಪಿ ಶೇ.3 ರಿಂದ 11.3 ಕ್ಕೆ ಏರಿದೆ. ಅದು ಎನ್‌ಡಿಎ ಅವಧಿಯಲ್ಲಾಗಿದ್ದೇ ಹೊರತು, 15 ವರ್ಷಗಳ ‘ಜಂಗಲ್ ರಾಜ್’ ಆಡಳಿತದಲ್ಲಿ ಅಲ್ಲ ಎಂದು ನಿರ್ಮಲಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು