ಗುರುವಾರ , ಸೆಪ್ಟೆಂಬರ್ 16, 2021
24 °C

ಜಮ್ಮು-ಕಾಶ್ಮೀರ: 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಕಣಿವೆಯಲ್ಲಿ ಕಾರ್ಯಾಚರಿಸುತ್ತಿರುವ 10 ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಸೋಮವಾರ ಬಿಡುಗಡೆ ಮಾಡಿದ್ದು, ಪಟ್ಟಿಯಲ್ಲಿ ಹೊಸದಾಗಿ ನೇಮಕಗೊಂಡಿರುವ ಮೂವರು ಉಗ್ರರ ಹೆಸರುಗಳಿವೆ.

ಸೋಮವಾರ ರಾತ್ರಿ ಕಾಶ್ಮೀರ ವಲಯ ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡ ಪಟ್ಟಿಯಲ್ಲಿ ಕೆಲ ಸಮಯದಿಂದ ಸಕ್ರಿಯರಾಗಿದ್ದ ಏಳು ಉಗ್ರಗಾಮಿಗಳ ಹೆಸರುಗಳೂ ಇವೆ.

ಪಟ್ಟಿಯಲ್ಲಿ ಸಲೀಂ ಪರ್ರೆ, ಯೂಸುಫ್ ಕಾಂಟ್ರೋ, ಅಬ್ಬಾಸ್ ಶೇಖ್, ರಿಯಾಜ್ ಶೆಟರ್‌ಗುಂಡ್‌, ಫಾರೂಕ್ ನಲಿ, ಜುಬೇರ್ ವಾನಿ ಮತ್ತು ಅಶ್ರಫ್ ಮೊಲ್ವಿ ಹಳೆಯ ಭಯೋತ್ಪಾದಕರಾಗಿದ್ದು, ಸಾಕಿಬ್ ಮಂಜೂರ್, ಉಮರ್ ಮುಸ್ತಾಕ್ ಖಾಂಡೆ ಮತ್ತು ವಕೀಲ ಶಾ ಈ ಮೂವರನ್ನು ಉಗ್ರ ಸಂಘಟನೆಗಳು ಹೊಸದಾಗಿ ನೇಮಿಸಿಕೊಂಡಿವೆ ಎಂದು ಜಮ್ಮು–ಕಾಶ್ಮೀರದ ಪೊಲೀಸರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ಇಲ್ಲಿಯವರೆಗೆ 90 ಉಗ್ರರನ್ನು ಹತ್ಯೆ ಮಾಡಲಾಗಿದೆ. ಇವರಲ್ಲಿ ಹೆಚ್ಚಿನವರು ಎಲ್‌ಇಟಿ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್‌ನ ಕಮಾಂಡರ್‌ಗಳಾಗಿದ್ದರು. ಹತ್ಯೆಗೀಡಾದ ಉಗ್ರರ ಪೈಕಿ, ಬಹುತೇಕರು (83) ಸ್ಥಳೀಯರಾಗಿದ್ದರೆ, ಏಳು ಮಂದಿ ಪಾಕಿಸ್ತಾನಿಯರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು