ಬುಧವಾರ, ಆಗಸ್ಟ್ 10, 2022
24 °C

ರಾಜ್ಯಸಭೆ: ಶೇ 31 ಸದಸ್ಯರಿಗೆ ಕ್ರಿಮಿನಲ್‌ ಹಿನ್ನೆಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜ್ಯಸಭೆಯ ಶೇ 31ರಷ್ಟು ಸದಸ್ಯರು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ ಎಂಬುದು ಅಸೋಸಿ ಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ನಡೆಸಿದ ವಿಶ್ಲೇಷಣಾ ವರದಿಯಿಂದ ಗೊತ್ತಾಗಿದೆ.

ರಾಜ್ಯಸಭೆಯ 233 ಸದಸ್ಯರ ಪೈಕಿ 226 ಸದಸ್ಯರ ಅಪರಾಧ ಹಿನ್ನೆಲೆ, ಹಣಕಾಸು, ಶಿಕ್ಷಣ, ಲಿಂಗ ಹಾಗೂ ಇತರ ವಿಷಯಗಳ ಬಗ್ಗೆ ಎಡಿಆರ್‌ ಈ ವಿಶ್ಲೇಷಣೆ ನಡೆಸಿದೆ.

ಬಿಜೆಪಿಯ 20, ಕಾಂಗ್ರೆಸ್‌ನ 12, ಆರ್‌ಜೆಡಿಯ ಆರು ಸದಸ್ಯರ ಪೈಕಿ 5 ಸದಸ್ಯರು ಕ್ರಿಮಿನಲ್‌ ಹಿನ್ನೆಲೆ ಹೊಂದಿದ್ದಾರೆ. ಉತ್ತರ ಪ್ರದೇಶದಿಂದ ಆಯ್ಕೆಯಾದ 7, ಮಹಾರಾಷ್ಟ್ರದಿಂದ ಆಯ್ಕೆಯಾದ 12, ತಮಿಳುನಾಡಿನಿಂದ ಆಯ್ಕೆಯಾದ 6, ಕೇರಳದ ಆರು ಸದಸ್ಯರು, ಬಿಹಾರದ 10 ಸದಸ್ಯರು ಇದರಲ್ಲಿ ಸೇರಿದ್ದಾರೆ.

ಇಬ್ಬರು ಸದಸ್ಯರು ಕೊಲೆ ಪ್ರಕರಣಗಳಲ್ಲಿ, ನಾಲ್ವರು ಕೊಲೆ ಯತ್ನ ಪ್ತಕರಣಗಳಲ್ಲಿ ಭಾಗಿಯಾಗಿದ್ದಾರೆ. ರಾಜಸ್ಥಾನದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್‌ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

86 ಸದಸ್ಯರು ₹ 10 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. 34 ಸದಸ್ಯರು ₹5 ಕೋಟಿಗಿಂತ, 77 ಸದಸ್ಯರು ₹1 ಕೋಟಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಕೋಟಿ ವೀರರ ಪೈಕಿ 74 ಸದಸ್ಯರು ಬಿಜೆಪಿಗೆ ಸೇರಿದವರು. 29 ಸದಸ್ಯರು ಕಾಂಗ್ರೆಸ್‌ನವರು.

ಟಿಆರ್‌ಎಸ್‌ ಪಕ್ಷದ ಏಳು ಸದಸ್ಯರ ಸರಾಸರಿ ಆಸ್ತಿ ₹799 ಕೋಟಿ. ವೈಎಸ್‌ಆರ್ ಕಾಂಗ್ರೆಸ್‌ ಪಕ್ಷದ ಸದಸ್ಯರ 9 ಸದಸ್ಯರ ಸರಾಸರಿ ಆಸ್ತಿ₹395 ಕೋಟಿ ಇದೆ. ಎನ್‌ಸಿಪಿಯ ನಾಲ್ವರು ಸದಸ್ಯರ ಸರಾಸರಿ ಆಸ್ತಿ ₹118 ಕೋಟಿ. ಕಾಂಗ್ರೆಸ್‌ ಸದಸ್ಯರ ಸರಾಸರಿ ಆಸ್ತಿ ₹50 ಕೋಟಿ ಇದ್ದರೆ, ಬಿಜೆಪಿ ಸದಸ್ಯರದ್ದು ₹27 ಕೋಟಿ ಇದೆ ಎಂದು ವರದಿಯಲ್ಲಿ ಉಲ್ಲೇಖಿ
ಸಲಾಗಿದೆ.

 

71 

ಸದಸ್ಯರಿಗೆ ಕ್ರಿಮಿನಲ್‌ ಹಿನ್ನೆಲೆ 

37 (ಶೇ 16)

ಸದಸ್ಯರ ವಿರುದ್ಧ ಗಂಭೀರವಾದ ಕ್ರಿಮಿನಲ್‌ ಪ್ರಕರಣಗಳು ಇವೆ

197 (ಶೇ 87)

ಸದಸ್ಯರು ಕೋಟಿ ವೀರರು 

₹79.54 ಕೋಟಿ 

ಪ್ರತಿ ಸದಸ್ಯರ ಸರಾಸರಿ ಆಸ್ತಿ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು