ಶುಕ್ರವಾರ, ಜುಲೈ 1, 2022
21 °C

ನಡುಗುತ್ತಿದೆ ರಾಜಧಾನಿ: ನವದೆಹಲಿ ಕನಿಷ್ಠ ತಾಪಮಾನ 3.5 ಡಿಗ್ರಿ ಸೆಲ್ಸಿಯಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಧಾನಿ ನವದೆಹಲಿ ನಡುಗುತ್ತಿದೆ. ಪಶ್ಚಿಮ ಹಿಮಾಲಯದಿಂದ ಬೀಸುತ್ತಿರುವ ಶೀತಗಾಳಿಯಿಂದಾಗಿ ದೆಹಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ದೆಹಲಿ–ಎನ್‌ಸಿಆರ್‌ನಲ್ಲಿ ಇಂದು 3.5 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಿಳಿಯಾದ ಆಗಸ ಮತ್ತು ಬಿಸಿಲು ಬೀಳುತ್ತಿದ್ದರೂ ಹಲವು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ದಾಖಲಾಗಿದೆ.

ಹಿಮದಿಂದ ಆವೃತವಾದ ಪಶ್ಚಿಮ ಹಿಮಾಲಯದಿಂದ ಬೀಸುತ್ತಿರುವ ಮೈಕೊರೆವ ಶೀತ ಗಾಳಿ ಮುಂದುವರೆದಿದೆ. ಹಾಗಾಗಿ, ಅಯನಗರ ಮತ್ತು ರಿಡ್ಜ್ ಹವಾಮಾನ ಕೇಂದ್ರಗಳಲ್ಲಿ ಕ್ರಮವಾಗಿ 3.8 ಮತ್ತು 3.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಗರಿಷ್ಠ ತಾಪಮಾನ 18 ಡಿಗ್ರಿಗೆ ನಿಲ್ಲಬಹುದು ಎಂದು ಹಮಾವಾನ ಇಲಾಖೆ ನಿರೀಕ್ಷೆ ಮಾಡಿದೆ. ಕೆಲ ಪ್ರದೇಶಗಳಲ್ಲಿ ಅತ್ಯಂತ ಶೀತದ ದಿನವಾಗಲಿದೆ ಎಂದು ಹೇಳಿದ್ದು, ದೆಹಲಿ ಜನರಿಗೆ ಮುನ್ಸೂಚನೆ ನೀಡಿದೆ.

ಶುಕ್ರವಾರದವರೆಗೆ ಕನಿಷ್ಠ ತಾಪಮಾನ 5 ಡಿಗ್ರಿ ಸೆಲ್ಸಿಯಸ್ ಒಳಗೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು