ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾವ ಪಕ್ಷದ ಚುನಾವಣೆ ರ‍್ಯಾಲಿಗಳೂ ಬೇಡ’: ಶೇ 41ರಷ್ಟು ಜನರ ಅಭಿಪ್ರಾಯ

Last Updated 9 ಜನವರಿ 2022, 11:38 IST
ಅಕ್ಷರ ಗಾತ್ರ

ನವದೆಹಲಿ: ನಮಗೆ ಯಾವ ರಾಜಕೀಯ ಪಕ್ಷಗಳ ಚುನಾವಣಾ ರ‍್ಯಾಲಿಗಳೂ ಬೇಡ ಎಂದು ಶೇ 41ರಷ್ಟು ಜನ ಅಭಿಪ್ರಾಯಪಟ್ಟಿರುವುದಾಗಿ ಸಮೀಕ್ಷೆಯೊಂದು ಹೇಳಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದ ವಿಧಾನಸಭೆ ಚುನಾವಣೆಗಾಗಿ ಶನಿವಾರ ವೇಳಾಪಟ್ಟಿ ಪ್ರಕಟವಾಗಿದೆ. ಈ ಮಧ್ಯೆ ಶೇ 31 ರಷ್ಟು ನಾಗರಿಕರು ಚುನಾವಣೆಯನ್ನು ಮುಂದೂಡಬಹುದಾಗಿತ್ತು ಎಂದೂ ಅಭಿಪ್ರಾಯಪಟ್ಟಿದ್ದಾರೆ ಎಂದು ‘ಲೋಕಲ್ ಸರ್ಕಲ್ಸ್’ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಗೊತ್ತಾಗಿದೆ.

ಪಂಚ ರಾಜ್ಯಗಳಿಗೆ ಚುನಾವಣೆ ಘೋಷಣೆ ಮಾಡಿರುವ ಆಯೋಗವು, ಈ ರಾಜ್ಯಗಳಲ್ಲಿ ಜನವರಿ 15 ರವರೆಗೆ ಸಾರ್ವಜನಿಕ ರ‍್ಯಾಲಿಗಳು, ರೋಡ್‌ಶೋಗಳು, ಸಭೆಗಳನ್ನು ನಿಷೇಧಿಸಿದೆ ಮತ್ತು ಕಟ್ಟುನಿಟ್ಟಾದ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಲು ಹೇಳಿದೆ.

ಚುನಾವಣೆಯ ಕಾರಣದಿಂದಾಗಿ ಕೋವಿಡ್ ಹರಡುವ ಅಪಾಯ ಕಡಿಮೆ, ಯಾವುದೇ ಕ್ರಮದ ಅಗತ್ಯವಿಲ್ಲ ಎಂದು ಶೇ. 4ರಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ.

ದೇಶದ 309 ಜಿಲ್ಲೆಗಳ 11,000 ಕ್ಕೂ ಹೆಚ್ಚು ಜನರನ್ನು ಸಂಪರ್ಕಿಸಿ ಈ ಸಮೀಕ್ಷೆಯನ್ನು ಮಾಡಲಾಗಿದೆ. ಮತದಾನ ನಡೆಯುವ ಐದು ರಾಜ್ಯಗಳ 4,172 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇ 68 ಮಂದಿ ಪುರುಷರಾಗಿದ್ದರೆ, ಶೇ 32 ಮಂದಿ ಮಹಿಳೆಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT