5 ವರ್ಷದ ಬಾಲಕಿ ಮೇಲಿನ ಅತ್ಯಾಚಾರಕ್ಕೆ 5 ಬಸ್ಕಿಯ ಶಿಕ್ಷೆ!

ನವಾದಾ, ಬಿಹಾರ: ಬಿಹಾರದ ನವಾದಾ ಜಿಲ್ಲೆಯ ಗ್ರಾಮವೊಂದರ ಮುಖಂಡರು ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಎಲ್ಲರ ಮುಂದೆ ಐದು ಬಸ್ಕಿ ಹೊಡೆಸುವ ಶಿಕ್ಷೆ ನೀಡಿದ್ದಾರೆ.
ಯುವಕ ಬಸ್ಕಿ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಮಗುವಿನ ಮೇಲಿನ ಅತ್ಯಾಚಾರದ ಕೃತ್ಯವನ್ನು ಹಗುರವಾಗಿ ತೆಗೆದುಕೊಂಡಿರುವ ಬಗ್ಗೆ ಎಲ್ಲೆಡೆ ಛೀಮಾರಿ ವ್ಯಕ್ತವಾಗಿದೆ.
ಆರೋಪಿ ಬಾಲಕಿಗೆ ಚಾಕೋಲೆಟ್ ಆಸೆ ತೋರಿಸಿ, ತನ್ನ ಕೋಳಿ ಫಾರ್ಮ್‌ನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದ. ಆರೋಪಿಯನ್ನು ಹಿಡಿದು ಗ್ರಾಮದ ಮುಖಂಡರ ಮುಂದೆ ಹಾಜರು ಪಡಿಸಲಾಗಿತ್ತು. ಈ ಸಂದರ್ಭ, ಬಾಲಕಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಕ್ಕೆ ಶಿಕ್ಷೆಯ ರೂಪದಲ್ಲಿ ಐದು ಬಸ್ಕಿಯನ್ನು ಹೊಡೆಸಲಾಗಿದೆ ಎಂದು ವರದಿಯಾಗಿದೆ.
ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಡಿಸಿಎಂ ತೇಜಸ್ವಿ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು, ಅಪರಾಧಿಗಳು ಹೀಗೆ ಬಚಾವಾಗಲು ರಾಜ್ಯ ಸರ್ಕಾರ ಅನುವು ಮಾಡಿಕೊಡುತ್ತದೆಯೇ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಎಸ್‌ಪಿ ಗೌರವ್ ಮಂಗ್ಲ, ಎಫ್‌ಐಆರ್ ದಾಖಲಿಸಿರುವುದಾಗಿ ತಿಳಿಸಿದರು. ಆರೋಪಿಯ ವಿರುದ್ಧ ಹಾಗೂ ಅಪರಾಧವನ್ನು ಮರೆಮಾಚಲು ಪ್ರಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
Why has India become the most dangerous place for a woman! The rapist of a minor girl of 5yrs old is being punished in a village with 5 sit-ups by the kangaroo court. pic.twitter.com/5bhL7OF46G
— Ashok Swain (@ashoswai) November 25, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.