ಮಂಗಳವಾರ, ಸೆಪ್ಟೆಂಬರ್ 21, 2021
29 °C

ದೇಶದಲ್ಲಿ 70 ‘ಡೆಲ್ಟಾ ಪ್ಲಸ್‌’ ರೂಪಾಂತರ ತಳಿ ಪ್ರಕರಣ: ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೊರೊನಾದ ರೂಪಾಂತರ ತಳಿ ಡೆಲ್ಟಾ ಪ್ಲಸ್‌ನ 70 ಪ್ರಕರಣಗಳು ಪತ್ತೆಯಾಗಿವೆ. 28 ಪ್ರಯೋಗಾಲಯಗಳಲ್ಲಿನ ಪರೀಕ್ಷಾ ಮಾದರಿಗಳ ಅನುಕ್ರಮದಲ್ಲಿ ಈ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.

ಈ ಕುರಿತು ಲಿಖಿತ ಉತ್ತರವನ್ನು ನೀಡಿರುವ ಅವರು, ಇದುವರೆಗೂ ಸಾರ್ಸ್‌–ಕೋವಿಡ್‌ 2 ಸೋಂಕಿನ 58,240 ಪರೀಕ್ಷಾ ಮಾದರಿಗಳನ್ನು ಅನುಕ್ರಮ ಮಾಡಲಾಗಿತ್ತು. ಈ ಪೈಕಿ 46,124 ಮಾದರಿಗಳ ವಿಶ್ಲೇಷಣೆ ನಡೆದಿದೆ ಎಂದು ತಿಳಿಸಿದರು.

ಇವುಗಳಲ್ಲಿ ಸುಮಾರು 17,169 ಪ್ರಕರಣಗಳು ಡೆಲ್ಟಾ ತಳಿಯದ್ದಾಗಿವೆ. ಉಳಿದಂತೆ 4,172 ಪ್ರಕರಣಗಳು ಅಲ್ಫಾ ತಳಿಯದ್ದಾಗಿದ್ದು, 217 ಬೆಟಾ ಪ್ರಕರಣಗಳು ಮತ್ತು 1 ಗಾಮ ತಳಿಯದ್ದಾಗಿದೆ. ದೇಶದಲ್ಲಿ ಕೋವಿಡ್ ಎರಡನೇ ಅಲೆಗೆ ಡೆಲ್ಟಾ ತಳಿ ಕಾರಣ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು