ಶುಕ್ರವಾರ, ಫೆಬ್ರವರಿ 3, 2023
18 °C

88 ವಿದ್ಯಾಂಸರಿಂದ ಭಾರತದ 12 ಸಾವಿರ ವರ್ಷಗಳ ಇತಿಹಾಸ ಒಳಗೊಂಡ ವರದಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 88 ಮಂದಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ಯಾಂಸರನ್ನು ಒಳಗೊಂಡ ತಂಡವು ಭಾರತದ 12 ಸಾವಿರ ವರ್ಷಗಳ ನಾಗರಿಕತೆ ಹಾಗೂ ಇತಿಹಾಸವನ್ನು ದಾಖಲು ಮಾಡಿದೆ.

ಇಲ್ಲಿನ ಭಾರತೀಯ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘12,000 ಇಯರ್ಸ್‌ ಆಫ್ ಇಂಡಿಯಾ–ರಿಪೋರ್ಟ್‌ ಆನ್‌ ದಿ ಸಿವಿಲೈಸೇಷನ್‌ ಆ್ಯಂಡ್‌ ಹಿಸ್ಟರೀಸ್‌ ಆಫ್‌ ಇಂಡಿಯಾ ಸಿನ್ಸ್ ಹೋಲೊಸಿನ್‌’ ವರದಿಯನ್ನು ಬಿಡುಗಡೆ ಮಾಡಲಾಯಿತು.

ಆನುವಂಶಿಕ, ಪುರಾತತ್ವ, ಮಾನವವಿಜ್ಞಾನ, ಭಾಷಾಶಾಸ್ತ್ರ, ತತ್ವಶಾಸ್ತ್ರ ಸೇರಿದಂತೆ ಒಟ್ಟು 100 ವಿಭಾಗಗಳನ್ನು ಈ ವರದಿ ಒಳಗೊಂಡಿದೆ.

‘ಜನಸಂಖ್ಯಾ ಬೆಳವಣಿಗೆ, ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಗಳ ಉಗಮ, ತತ್ವಶಾಸ್ತ್ರ ಮತ್ತು ತತ್ವಮೀಮಾಂಸೆಗಳ ಅಭಿವೃದ್ಧಿ, ಭಾಷಾ ವೈವಿಧ್ಯತೆ ಮತ್ತು ಅಭಿವ್ಯಕ್ತಿ, ಸಾಮಾಜಿಕ ಚಳವಳಿಗಳ ಕುರಿತು ಈ ವರದಿ ಸ್ಪಷ್ಟ ಚಿತ್ರಣ ನೀಡಲಿದೆ’ ಎಂದು ಸಾಹಿತ್ಯ ವಿಮರ್ಶಕ ಗಣೇಶ್‌ ದೇವಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು