ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

98 ವರ್ಷದ ವೃದ್ಧ ಜೈಲಿನಿಂದ ಬಿಡುಗಡೆ: ಎಸ್ಕಾರ್ಟ್ ನೀಡಿ ಬೀಳ್ಕೊಟ್ಟ ಜೈಲು ಅಧೀಕ್ಷಕ

Last Updated 9 ಜನವರಿ 2023, 2:55 IST
ಅಕ್ಷರ ಗಾತ್ರ

ಅಯೋಧ್ಯೆ (ಉತ್ತರ ಪ್ರದೇಶ): ಐದು ವರ್ಷ ಜೈಲು ಶಿಕ್ಷೆ ಅನುಭವಿಸಿ 98 ವರ್ಷದ ವೃದ್ಧರೊಬ್ಬರು ಅಯೋಧ್ಯೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ಅವರಿಗೆ ಜೈಲು ಸಿಬ್ಬಂದಿ ಬೀಳ್ಕೊಡುಗೆ ನೀಡಿರುವ ಸಂಗತಿ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿದೆ.

ಅಯೋಧ್ಯೆಯ ವಯೋವೃದ್ಧ ರಾಮ್ ಸೂರತ್ ಎಂಬುವರು ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣದಲ್ಲಿ ಕಳೆದ ಐದು ವರ್ಷದ ಹಿಂದೆ ಜೈಲು ಸೇರಿದ್ದರು. ಇದೀಗ ಜೈಲು ಶಿಕ್ಷೆಯನ್ನು ಪೂರೈಸಿರುವ ಅವರು ಇತ್ತೀಚೆಗೆ ಬಿಡುಗಡೆಯಾದರು.

ಈ ವೇಳೆ ಜೈಲು ಅಧೀಕ್ಷಕ ಶಶಿಕಾಂತ್ ಮಿಶ್ರಾ ಅವರು ರಾಮ್ ಅವರಿಗೆ ಬೆಂಗಾವಲು ನೀಡಿ (ಎಸ್ಕಾರ್ಟ್‌) ಮನೆಗೆ ತಲುಪಿಸಿದ್ದಾರೆ. ಇದೇ ವೇಳೆ ರಾಮ್ ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ. ಈ ವಿಡಿಯೊವನ್ನು ಉತ್ತರಪ್ರದೇಶದ ಕಾರಾಗೃಹ ಇಲಾಖೆ ಡಿಜಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ರಾಮ್ ಸೂರತ್ ಐಪಿಸಿ ಸೆಕ್ಷನ್ 452, 323, 352 ಅಡಿ ಶಿಕ್ಷೆಗೊಳಗಾಗಿದ್ದರು. ಬಿಡುಗಡೆ ವೇಳೆ ರಾಮ್ ಸೂರತ್‌ ಅವರ ಯಾವುದೇ ಸಂಬಂಧಿಗಳು ಹಾಜರಿರಲಿಲ್ಲ’ ಎಂದು ಶಶಿಕಾಂತ್ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT