ನವದೆಹಲಿ: ಪುಶ್‌ಬ್ಯಾಕ್ ವೇಳೆ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನವು ವಿದ್ಯುತ್ ಕಂಬಕ್ಕೆ ಬಡಿದಿರುವ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಸ್ಪೈಸ್ ಜೆಟ್‌ನ ಎಸ್‌ಜಿ–160 ವಿಮಾನವು ದೆಹಲಿಯಿಂದ ಜಮ್ಮುವಿಗೆ ತೆರಳಬೇಕಿತ್ತು. ಪ್ಯಾಸೆಂಜರ್ ಟರ್ಮಿನಲ್‌ನಿಂದ ವಿಮಾನವು ರನ್‌ವೇ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಬಂಧಿಸಿದೆ. ಅದೃಷ್ಟವಶಾತ್, ಯಾವುದೇ ಪ್ರಯಾಣಿಕರಿಗೆ ತೊಂದರೆ ಆಗಿಲ್ಲ. ಕೂಡಲೇ ಪ್ರಯಾಣಿಕರನ್ನು ಬೇರೊಂದು ಏರ್‌ಕ್ರಾಫ್ಟ್‌ಗೆ ಸ್ಥಳಾಂತರಿಸಲಾಗಿದೆ.

ಘಟನೆ ಕುರಿತಂತೆ ತನಿಖೆಗೆ ಆದೇಶಿಸಿರುವುದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ವಿಮಾನದ ಪುಶ್‌ಬ್ಯಾಕ್ ಸಂದರ್ಭ ಬಲಬದಿಯ ರೆಕ್ಕೆ ವಿದ್ಯುತ್ ಕಂಬಕ್ಕೆ ಬಡಿದಿದೆ. ಇದರಿಂದ ವಿಮಾನ ಮತ್ತು ಕಂಬ ಎರಡಕ್ಕೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.