ಅಮೃತಸರ: ಪಂಜಾಬ್‌ನಲ್ಲಿ ನಡೆಯುವ 2022ರ ವಿಧಾನಸಭೆ ಚುನಾವಣೆ ವೇಳೆ ಸಿಖ್ ಸಮುದಾಯದ ವ್ಯಕ್ತಿ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ನಗರದಲ್ಲಿಮಾಧ್ಯಮದವರೊಂದಿಗೆ ಮಾತನಾಡಿದ ಅವರು,ʼಸಿಖ್ ಸಮುದಾಯದ ವ್ಯಕ್ತಿಯು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ.ಇದು ಸಿಖ್ ಸಮುದಾಯದ ಹಕ್ಕು. ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದನ್ನು ನಂತರ ಚರ್ಚಿಸಲಾಗುವುದು. ಆದರೆ, ಅದು ಯಾರೇ ಆದರೂ ಸಿಖ್ ಸಮುದಾಯದವರೇ ಆಗಿರುತ್ತಾರೆʼ ಎಂದುಹೇಳಿದ್ದಾರೆ.

ಇದೇ ವೇಳೆನಿವೃತ್ತ ಐಪಿಎಸ್ ಅಧಿಕಾರಿ ಕುನ್ವಾರ್ ವಿಜಯ್ ಪ್ರತಾಪ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಎಎಪಿಗೆ ಸೇರ್ಪಡೆಗೊಂಡರು. ಇದು ಮುಂಬರುವ ವಿಧಾನಸಭೆ ಚುನಾವಣೆಗೆ ಎಎಪಿಗೆಹೊಸ ಉತ್ಸಾಹ ನೀಡಿದೆ. ಈ ಬಗ್ಗೆ ಮಾತನಾಡಿರುವ ದೆಹಲಿ ಸಿಎಂ, ʼಕುನ್ವಾರ್ ವಿಜಯ್ ಪ್ರತಾಪ್ ಅವರು ರಾಜಕಾರಣಿಯಲ್ಲ. ಅವರನ್ನು ʼಜನಸಾಮಾನ್ಯರ ಆರಕ್ಷಕʼ ಎನ್ನಲಾಗಿದೆ. ನಾವೆಲ್ಲರೂ ದೇಶ ಸೇವೆಗಾಗಿ ಇಲ್ಲಿ ಸೇರಿದ್ದೇವೆ. ಅದೇ ಮನೋಭಾವದಿಂದ ಅವರು (ಕುನ್ವಾರ್) ಇಂದು ಪಕ್ಷಕ್ಕೆ ಸೇರಿಕೊಂಡಿದ್ದಾರೆʼ ಎಂದರು.

117 ಸದಸ್ಯ ಬಲದ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪೂರ್ಣ ಬಹುಮತ ಪಡೆದುಕೊಂಡಿತ್ತು.ಮೊದಲ ಬಾರಿಗೆ ಸ್ಪರ್ಧಿಸಿದ್ದ ಎಎಪಿ20 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.