ನವದೆಹಲಿ: ದೆಹಲಿ ಸರ್ಕಾರ ಬುಧವಾರ ₹ 78,800 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿತು.
ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್ ಅವರು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದರು. ಮೂಲಸೌಕರ್ಯಕ್ಕೆ ₹22,000, ಶಿಕ್ಷಣಕ್ಕೆ ₹ 16 ಸಾವಿರ ಕೋಟಿ, ಆರೋಗ್ಯಕ್ಕೆ ₹ 9 ಸಾವಿರ ಕೋಟಿ, ಜಾಹೀರಾತುಗಳಿಗೆ ₹ 550 ಕೋಟಿ ಮೀಸಲಿಡಲಾಗಿದೆ ಎಂದು ಕೈಲಾಶ್ ಗೆಹ್ಲೋತ್ ಹೇಳಿದರು.
ಈ ಸಲದ ಬಜೆಟ್‌ನಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಗೆಹ್ಲೋತ್ ಹೇಳಿದರು.
ಮಂಗಳವಾರವೇ ಬಜೆಟ್ ಮಂಡಣೆಯಾಗಬೇಕಿತ್ತು. ಆದರೆ ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟದಿಂದಾಗಿ ಬಜೆಟ್ ಮಂಡನೆ ಒಂದು ದಿನ ವಿಳಂಬವಾಯಿತು.
ಬಜೆಟ್‌ನಲ್ಲಿನ ಮೂಲಸೌಕರ್ಯ, ಜಾಹೀರಾತು ಮತ್ತು ಕೆಲವು ಹಂಚಿಕೆಗಳಿಗೆ ಆರಂಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಗೃಹ ಸಚಿವಾಲಯ ದೆಹಲಿ ಬಜೆಟ್‌ಗೆ ಅನುಮೋದನೆ ನೀಡಿದೆ.
ಎಎಪಿ ಸರ್ಕಾರದ ಸ್ಪಷ್ಟೀಕರಣದ ನಂತರ ಮಂಗಳವಾರ ಸಂಜೆ ದೆಹಲಿ ಬಜೆಟ್ ಅನ್ನು ಕೇಂದ್ರವು ಅಂಗೀಕರಿಸಿ, ವಿಧಾನಸಭೆಯಲ್ಲಿ ಅದರ ಮಂಡನೆಗೆ ದಾರಿ ಮಾಡಿಕೊಟ್ಟಿತು.
ಲೆಫ್ಟಿನೆಂಟ್ ಗವರ್ನರ್ ಅವರ ಕಳವಳಗಳನ್ನು ಅರವಿಂದ್ ಕೇಜ್ರಿವಾಲ್ ಸರ್ಕಾರ ಪರಿಹರಿಸಿದ ನಂತರ ಬಜೆಟ್ ಮಂಡಿಸುವ ದಾರಿ ಸುಗಮವಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.