ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ದುಲ್‌ ಕಲಾಂ ಜನ್ಮ ದಿನಾಚರಣೆ: ಉಪರಾಷ್ಟ್ರಪತಿ, ಪ್ರಧಾನಿಯಿಂದ ಗೌರವ ನಮನ

Last Updated 15 ಅಕ್ಟೋಬರ್ 2020, 6:42 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ರಾಷ್ಟ್ರಪತಿ ಡಾ. ಎ.‍ಪಿ.ಜೆ. ಅಬ್ದುಲ್‌ ಕಲಾಂ ಅವರ 89ನೇ ಜನ್ಮ ದಿನಾಚರಣೆಯ ಅಂಗವಾಗಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗೌರವ ನಮನ ಸಲ್ಲಿಸಿದ್ದಾರೆ.

ಈ ವೇಳೆ ನಾಯ್ಡು ಅವರು, ‘ಕನಸುಗಳು ಆಲೋಚನೆಯಾಗಿ ಮಾರ್ಪಡುತ್ತವೆ, ಆಲೋಚನೆಗಳು ನಡೆಯಾಗಿ ಬದಲಾಗುತ್ತವೆ’ ಎಂಬ ಕಲಾಂ ಅವರ ನುಡಿಯನ್ನು ನೆನಪಿಸಿಕೊಂಡಿದ್ದಾರೆ.

‘ಕಲಾಂ ಅವರು ತಮ್ಮ ಸರಳತೆಯಿಂದ ಜನರ ಮನಸ್ಸು ಗೆದ್ದಿದ್ದರು. ಅವರು ಆಗಾದ ಜ್ಞಾನ ಹೊಂದಿದ್ದರು. ಭಾರತದ ರಕ್ಷಣಾ ಮತ್ತು ಬಾಹ್ಯಾಕಾಶ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ಎಂದು ನಾಯ್ಡು ಅವರು ಬಣ್ಣಿಸಿದ್ದಾರೆ’ ಎಂದು ಉಪರಾಷ್ಟ್ರಪತಿ ಸಚಿವಾಲಯ ಟ್ವೀಟ್‌ ಮಾಡಿದೆ.

’ಕಲಾಂ ಅವರು ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ದೇಶಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಅವರ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಅವರ ಜೀವನ ಪಯಣ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದೆ‘ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ. ಕಲಾಂ ಅವರ ಜೀವನದ ಕಿರು ತುಣುಕುಗಳನ್ನು ಅವರು ಟ್ಯಾಗ್‌ ಮಾಡಿದ್ದಾರೆ.

ಅಬ್ದುಲ್‌ ಕಲಾಂ ಅವರು 1931 ರಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ರಾಷ್ಟ್ರಪತಿ ಭವನದ ಬಾಗಿಲನ್ನು ಜನಸಾಮಾನ್ಯರಿಗೆ ತೆರೆಯುವ ಮೂಲಕ ‘ಜನರ ರಾಷ್ಟ್ರಪತಿ’ ಎನಿಸಿಕೊಂಡರು. ಕ್ಷಿಪಣಿ ಅಭಿವೃದ್ದಿಯಲ್ಲಿ ಅವರ ಕೊಡುಗೆಗಾಗಿ ಅವರನ್ನು ‘ಭಾರತದ ಕ್ಷಿಪಣಿ ಪಿತಾಮಹ’ ಎಂದು ಕರೆಯಲಾಗುತ್ತದೆ. ಕಲಾಂ ಅವರು 2015ರಲ್ಲಿ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT