ರೈತರ ಶಾಂತಿಯುತ ಪ್ರತಿಭಟನೆ ಹತ್ತಿಕ್ಕುವುದು ಸರಿಯಲ್ಲ –ಕೇಜ್ರಿವಾಲ್

ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಶಾಂತಿಯುತ ಪ್ರತಿಭಟನೆ ನಡೆಸದಂತೆ ತಡೆಯುವುದು ಮತ್ತು ಅವರ ವಿರುದ್ಧ ಜಲಫಿರಂಗಿ ಪ್ರಯೋಗಿಸುವುದು ಸರಿಯಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
‘ದೆಹಲಿ ಚಲೊ’ ಪ್ರತಿಭಟನೆಯ ಭಾಗವಾಗಿ ರೈತರು ತಮ್ಮ ಟ್ರ್ಯಾಕ್ಟರ್ ಮತ್ತು ಟ್ರೇಲರ್ ಜೊತೆಗೆ ಗಡಿದಾಟುವುದನ್ನು ತಡೆಯಲು ಹರಿಯಾಣ ಗಡಿಯುದ್ಧಕ್ಕೂ ತಡೆಗೋಡೆ ಹಾಕಿ ನಿರ್ಭಂಧಿಸಿತ್ತು. ರೈತರನ್ನು ಚದುರಿಸಲು ಎರಡು ಬಾರಿ ಜಲಫಿರಂಗಿಯನ್ನು ಪ್ರಯೋಗಿಸಲಾಗಿತ್ತು.
ಈ ಕುರಿತು ಟ್ವೀಟ್ ಮಾಡಿರುವ ಅವರು, ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ರೈತರಿಗೆ ಸಂವಿಧಾನದತ್ತವಾಗಿ ದೊರೆತಿರುವ ಅಧಿಕಾರ. ಕೇಂದ್ರ ರೂಪಿಸಿರುವ ಎಲ್ಲ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ರೈತವಿರೋಧಿ. ಅವುಗಳನ್ನು ಹಿಂಪಡೆಯುವ ಬದಲು ಪ್ರತಿಭಟನೆಯನ್ನೇ ಹತ್ತಿಕ್ಕುವುದು ಸರಿಯಾದುದಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೊ | ಹರಿಯಾಣ- ದೆಹಲಿ ಗಡಿ: ಭಾರೀ ಸಂಖ್ಯೆಯಲ್ಲಿ ರೈತರ ಜಮಾವಣೆ
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.