ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಅರ್ಜಿಗೆ ಸಹಿ ಹಾಕಿದ ತಮಿಳಿನ ನಟ ಕಾರ್ತಿ; ಮನವಿ ಮಾಡಿಕೊಂಡಿದ್ದೇನು?

Last Updated 9 ಜನವರಿ 2022, 11:08 IST
ಅಕ್ಷರ ಗಾತ್ರ

ಚೆನ್ನೈ: ತಮಿಳಿನ ಖ್ಯಾತ ನಟ ಕಾರ್ತಿ ಅವರು ರೈತರಿಗೆ ಸಹಾಯ ಮಾಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ತಳೀಯ ವಿಜ್ಞಾನದ ಪ್ರಕಾರ ಮಾರ್ಪಾಟು (ಜಿಎಂ) ಮಾಡಿದ ಆಹಾರ ಪದಾರ್ಥಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ತಡೆಯುವ ಸಲುವಾಗಿ ಆನ್‌ಲೈನ್ ಅರ್ಜಿಯೊಂದಕ್ಕೆ ಸಹಿ ಹಾಕಿದ್ದಾರೆ.

ಕೃಷಿ ಪದ್ಧತಿಗಳು ಮತ್ತು ಉತ್ಪನ್ನಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ನಟ ಕಾರ್ತಿ ಆನ್‌ಲೈನ್ ಅರ್ಜಿಯ ಲಿಂಕ್ ಅನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. 'ಆತ್ಮೀಯ ಸ್ನೇಹಿತರೇ, ನಾವೆಲ್ಲರೂ ಕಾಳಜಿ ವಹಿಸಬೇಕಾದ ಪ್ರಮುಖ ಆನ್‌ಲೈನ್ ಅರ್ಜಿ ಇದಾಗಿದೆ. ನಮ್ಮ ಜೀವನದಲ್ಲಿ ಪ್ರವಾಹದಂತೆ ಬರುವ ತಳೀಯ ವಿಜ್ಞಾನದ ಪ್ರಕಾರ ಮಾರ್ಪಾಟು ಮಾಡಿದ ಆಹಾರಗಳಿಗೆ ಗೇಟ್‌ಗಳನ್ನು ತೆರೆಯಬಹುದಾದ GM & amp; GE ಆಹಾರದ ಮೇಲಿನ ನಿಯಮಾವಳಿಗಳನ್ನು ಬದಲಾಯಿಸುತ್ತಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವನ್ನು ಎಚ್ಚರಿಸುವಂತದ್ದಾಗಿದೆ. ನಾನು ಸಹಿ ಮಾಡುತ್ತಿದ್ದೇನೆ. ನೀವು ಇದನ್ನು ಒಪ್ಪಿದರೆ ದಯವಿಟ್ಟು ಸಹಿ ಮಾಡಿ' ಎಂದಿದ್ದಾರೆ.

ಆರೋಗ್ಯ ಮತ್ತು ಆಹಾರ ಸುರಕ್ಷತೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುವುದನ್ನು ತೋರಿಸಿರುವ ಅಧ್ಯಯನಗಳ ಹೊರತಾಗಿಯೂ ಭಾರತ ಸರ್ಕಾರವು ತಳೀಯವಾಗಿ ಮಾರ್ಪಡಿಸಿದ (GM) ಆಹಾರಗಳಿಗೆ ಅನುಮತಿ ನೀಡಲು ಸಜ್ಜಾಗುತ್ತಿದೆ ಎಂದು ಆನ್‌ಲೈನ್ ಅರ್ಜಿಯ ಲಿಂಕ್ ಹೇಳುತ್ತದೆ.

ಸುಸ್ಥಿರ ಕೃಷಿ ಮತ್ತು ಸುರಕ್ಷಿತ ಆಹಾರದ ಉತ್ಸಾಹಿಗಳೆಂದು ಗುರುತಿಸಲಾದ ಅರ್ಜಿದಾರರಾದ ಅನಂತೂ, ರಾಜೇಶ್ ಕೃಷ್ಣನ್ ಮತ್ತು ಉಷಾ ಸೂಲಪಾನಿ ಅರ್ಜಿಯ ಜೊತೆ ಲಗತ್ತಿಸಿರುವ ಲೇಖನದಲ್ಲಿ, ವಿವಿಧ ಅಧ್ಯಯನಗಳಲ್ಲಿ ಜಿಎಂ ಆಹಾರಗಳು ಅಲರ್ಜಿಗಳು, ಪ್ರತಿರಕ್ಷಣಾ ವ್ಯವಸ್ಥೆಯ ದುರ್ಬಲತೆ, ಕುಂಠಿತ ಬೆಳವಣಿಗೆ ಮತ್ತು ಅಭಿವೃದ್ಧಿ, ಅಂಗಾಂಗ ಹಾನಿ, ಸಂತಾನೋತ್ಪತ್ತಿ ಆರೋಗ್ಯದ ಪರಿಣಾಮಗಳು ಮತ್ತು ಪೂರ್ವ ಕ್ಯಾನ್ಸರ್ ಬೆಳವಣಿಗೆಯಂತಹ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.

ಅವು ಪರಿಸರ ಮತ್ತು ಆರೋಗ್ಯಕ್ಕೆ ಸುರಕ್ಷಿತವಲ್ಲ ಎಂದು ಪರಿಗಣಿಸಿರುವುದರಿಂದ ಪ್ರಪಂಚದ ಬಹುಪಾಲು ದೇಶಗಳು ಜಿಎಂ ಬೆಳೆ ಕೃಷಿಯನ್ನು ಒಪ್ಪಿಕೊಂಡಿಲ್ಲ ಮತ್ತು ಭಾರತದಲ್ಲಿ GM ಆಹಾರ ಬೆಳೆಗಳನ್ನು ಬೆಳೆಯಲು ಅನುಮತಿ ನೀಡಿಲ್ಲ. ಹೀಗಿದ್ದರೂ, ಈಗ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ದುರ್ಬಲ ಹೊಸ ನಿಯಮಗಳನ್ನು ರೂಪಿಸುವ ಮೂಲಕ ಜಿಎಂ ಆಹಾರಗಳಿಗೆ ಅನುಮತಿ ನೀಡಲು (ಆಮದು ಮಾಡಿಕೊಳ್ಳಲು) ಏಕೆ ಮುಂದಾಗಿದೆ ಎಂದು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಉದ್ದೇಶಿಸಿ ಸಲ್ಲಿಸಿದ ಮನವಿಯಲ್ಲಿ ಬೇಡಿಕೆಗಳ ಪಟ್ಟಿ ಮಾಡಿದ್ದು, ದೇಶದ ನಾಗರಿಕರಿಗೆ ಜಿಎಂ ಆಹಾರಗಳು, ಲೇಬಲ್ ಅಥವಾ ಲೇಬಲ್‌ ಇಲ್ಲದವುಗಳನ್ನು ಬಯಸುವುದಿಲ್ಲ ಎಂಬ ಅಂಶವನ್ನು ಒತ್ತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT