ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ ಟೀಕೆ: ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ ಎಂದ ಉಮಾಭಾರತಿ

Last Updated 22 ಸೆಪ್ಟೆಂಬರ್ 2021, 7:28 IST
ಅಕ್ಷರ ಗಾತ್ರ

ಭೋಪಾಲ್‌: ‘ಸರ್ಕಾರಿ ಅಧಿಕಾರಿಗಳು ನಮ್ಮ(ನಾಯಕರ) ಚಪ್ಪಲಿ ಎತ್ತಲಿಕಷ್ಟೇ ಇರೋದು'ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ, ‘ನನ್ನ ಮಾತುಗಳಿಂದ ನನಗೆ ನೋವಾಗಿದೆ. ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳ ವಿರುದ್ಧ ಉಮಾಭಾರತಿ ಅವರು ಈಚೆಗೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಕಾಂಗ್ರೆಸ್‌ ನಾಯಕ ದ್ವಿಗ್ವಿಜಯ್‌ ಸಿಂಗ್‌ ಈ ವಿಷಯವಾಗಿ ಉಮಾಭಾರತಿ ವಿರುದ್ಧ ಹರಿಹಾಯ್ದಿದ್ದರು.

ಕಡಿಮೆ ಮಾತನಾಡುವಂತೆ ಉಮಾಭಾರತಿ ಅವರಿಗೆ ಕಿವಿಮಾತು ಹೇಳಿದ್ದ ಅವರು, ಅಧಿಕಾರಿಗಳ ವಿರುದ್ಧ ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕೆಂದೂ ಒತ್ತಾಯಿಸಿದ್ದರು.

ಈ ಕುರಿತು ಉಮಾಭಾರತಿಯವರು ದಿಗ್ವಿಜಯ್‌ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ‘ನನ್ನ ಮಾತಿನಿಂದ ನನಗೇ ನೋವಾಗಿದೆ. ನಾನು ಯಾವಾಗಲೂ ನಿಮಗೆ ಕಡಿಮೆ ಮಾತನಾಡಿ. ನೀವು ಹದವಾದ ಭಾಷೆ ಬಳಸುವುದಿಲ್ಲ ಎಂದು ನಾನು ಹೇಳುತ್ತಿದ್ದೆ. ಈಗ ನಾನೇ ನನ್ನ ಭಾಷೆಯನ್ನು ಸುಧಾರಿಸಿಕೊಳ್ಳುತ್ತೇನೆ. ನೀವು ಹಾಗೇ ಮಾಡಿ’ ಎಂದು ತಿಳಿಸಿದ್ದಾರೆ. ಪತ್ರದಲ್ಲಿ ಅವರು ‘ರಾಮಾಯಣ'ದ ಶ್ಲೋಕಗಳನ್ನು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT