ಮಂಗಳವಾರ, ಮಾರ್ಚ್ 28, 2023
23 °C

ಏರ್‌ ಇಂಡಿಯಾ: ₹ 2550 ಕೋಟಿ ಆದಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ವಂದೇ ಭಾರತ್ ಮಿಷನ್ ಅಡಿಯಲ್ಲಿ ಒದಗಿಸಿದ ವೈಮಾನಿಕ ಸೇವೆಯಿಂದ ಏರ್ ಇಂಡಿಯಾ ಸಂಸ್ಥೆಯು ಆಗಸ್ಟ್‌ 31ರವರೆಗೆ ₹ 2556.60 ಕೋಟಿ ಆದಾಯ ಗಳಿಸಿದೆ’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. 

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಈ ವರ್ಷದ ಮಾರ್ಚ್ 23ರವರೆಗೆ ಅಂತರರಾಷ್ಟ್ರೀಯ ವಿಮಾನಸಂಚಾರವನ್ನು ನಿಷೇಧಿಸಲಾಗಿತ್ತು. ವಿವಿಧ ದೇಶಗಳಲ್ಲಿ ಅತಂತ್ರರಾಗಿದ್ದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರವು ಮೇ 6 ರಿಂದ ಮಿಷನ್ ಪ್ರಾರಂಭಿಸಿತು.

ಆಗಸ್ಟ್‌ 31ರವರೆಗೆ ಒಟ್ಟು 4,505 ವಿಶೇಷ ವಿಮಾನಗಳು ಹಾರಾಟ ನಡೆಸಿವೆ. ನಾಲ್ಕು ಲಕ್ಷ  ಜನರನ್ನು ಏರ್‌ ಇಂಡಿಯಾ ಭಾರತಕ್ಕೆ ಕರೆತಂದಿದೆ. 1.9 ಲಕ್ಷ ಪ್ರಯಾಣಿಕರು ವಿಶೇಷ ವಿಮಾನಗಳ ಮೂಲಕ ವಿದೇಶಕ್ಕೆ ತೆರಳಿದ್ದಾರೆ’ ಎಂದು ಸಚಿವರು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು