ಶನಿವಾರ, ಅಕ್ಟೋಬರ್ 23, 2021
24 °C
ವಿಮಾನಯಾನ ಸಚಿವಾಲಯದಿಂದ ಆದೇಶ

ಶೇ 85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದಹೆಲಿ:‘ದೇಶೀಯ ವಿಮಾನಯಾನ ಸಂಸ್ಥೆಗಳು ಶೇ 72.5ಕ್ಕೆ ಬದಲಾಗಿ ಶೇ 85ರಷ್ಟು ಪ್ರಮಾಣದಲ್ಲಿ ವಿಮಾನಗಳ ಹಾರಾಟ ನಡೆಸಬಹುದು’ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಶನಿವಾರ ತಿಳಿಸಿದೆ. 

ಸಚಿವಾಲಯದ ಆದೇಶದ ಪ್ರಕಾರ, ‘ಆಗಸ್ಟ್‌ 12ರವರೆಗೆ ವಿಮಾನಯಾನ ಸಂಸ್ಥೆಗಳು ಶೇ 72.5ರಷ್ಟು ಪ್ರಮಾಣದಲ್ಲಿ ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದ್ದವು. ಜುಲೈ 5ರಿಂದ ಆಗಸ್ಟ್‌ 12ರವರೆಗೆ ಈ ಪ್ರಮಾಣವು ಶೇ 64 ಹಾಗೂ ಜೂನ್ 1ರಿಂದ ಜುಲೈ 5ರವರೆಗೆ  ಈ ಪ್ರಮಾಣವು ಶೇ 50ರಷ್ಟು ಇತ್ತು’ ಎಂದು ತಿಳಿಸಿದೆ.

ಈ ಸಂಬಂಧ ಶನಿವಾರ ಹೊಸದಾಗಿ ಆದೇಶ ಹೊರಡಿಸಿರುವ ಸಚಿವಾಲಯವು, ಇದೀಗ ಶೇ 85ರಷ್ಟು ಪ್ರಮಾಣದಲ್ಲಿ ವಿಮಾನಯಾನಕ್ಕೆ ಅನುಮತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು