ಭಾನುವಾರ, ನವೆಂಬರ್ 28, 2021
20 °C

ಅಮರಿಂದರ್ ಸಿಂಗ್ ಅವಕಾಶವಾದಿ: ಪಂಜಾಬ್ ಉಪಮುಖ್ಯಮಂತ್ರಿ ರಾಂಧವ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಅಮರಿಂದರ್ ಸಿಂಗ್ ಒಬ್ಬ ‘ಅವಕಾಶವಾದಿ’, ಪಂಜಾಬ್‌ಗೆ ದ್ರೋಹ ಮಾಡಿದ್ದಾರೆ ಎಂದು ಪಂಜಾಬ್ ಉಪಮುಖ್ಯಮಂತ್ರಿ ಸುಖಜಿಂದರ್ ಸಿಂಗ್ ರಾಂಧವ ಬುಧವಾರ ಕಿಡಿಕಾರಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್ ಅವರು ತಮ್ಮದೇ ರಾಜಕೀಯ ಪಕ್ಷ ಆರಂಭಿಸುವುದಾಗಿ ಘೋಷಿಸಿದ ಒಂದು ದಿನದ ನಂತರ ರಾಂಧವಾ ಈ ಟೀಕೆ ಮಾಡಿದ್ದಾರೆ.

‘ಅಮರಿಂದರ್ ಸಿಂಗ್ ತಮ್ಮ ಬಗ್ಗೆ, ತಮ್ಮ ಕುಟುಂಬ ಮತ್ತು ತಮ್ಮ ಸ್ನೇಹಿತರ ಬಗ್ಗೆ ಮಾತ್ರ ಯೋಚಿಸುತ್ತಾರೆ. ರಾಜ್ಯದ ಹಿತದ ಬಗ್ಗೆ ಎಂದಿಗೂ ಯೋಚಿಸದವರ ಪರ ನಿಂತಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಿಂದ ಅವರು ಪಂಜಾಬ್‌ಗೆ ದ್ರೋಹ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ಪಂಜಾಬ್ ಪಾಕಿಸ್ತಾನ ಅಥವಾ ಚೀನಾಕ್ಕೆ ಹೆದರುವುದಿಲ್ಲ. ಇಂದು ಪಂಜಾಬ್ ಯಾವುದಾದರೂ ಬೆದರಿಕೆಯನ್ನು ಎದುರಿಸುತ್ತಿದ್ದರೆ, ಅದು ಅಮರಿಂದರ್ ಸಿಂಗ್ ಅವರಿಂದ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು