ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಪುರ ‍ಫೂಟ್‌ ಯುಎಸ್‌ಎ: ಮೊಬೈಲ್‌ ವ್ಯಾನ್‌ ಮೂಲಕ ಉಚಿತ ಮೂಳೆ ಜೋಡಣೆ

Last Updated 12 ಜುಲೈ 2021, 6:44 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕೊರೊನಾ ಪಿಡುಗಿನ ನಡುವೆ ‘ಜೈಪುರ ಫೂಟ್ ಯುಎಸ್‌ಎ’ ಸಂಸ್ಥೆಯು ವಿಶೇಷವಾಗಿ ವಿನ್ಯಾಸಗೊಳಿಸಿದ ಮೊಬೈಲ್‌ ವ್ಯಾನ್‌ ಮೂಲಕ ಅಂಗವಿಕಲರಿಗೆ ಉಚಿತ ಅಂಗಾಂಗ ಜೋಡಣೆ ಸೇವೆಯನ್ನು ಒದಗಿಸುತ್ತಿದ್ದು, ಗುಜರಾತ್‌ನ ಜಿಲ್ಲೆಗಳಲ್ಲಿ ಈ ಸೇವೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

‘ಮೂವರು ತಂತ್ರಜ್ಞರು ಮತ್ತು ತಜ್ಞರನ್ನೊಳಗೊಂಡ ಸಂಪೂರ್ಣ ಸುಸಜ್ಜಿತ ಮೊಬೈಲ್ ವ್ಯಾನ್ ಶೀಘ್ರದಲ್ಲಿ ರಸ್ತೆಗಿಳಿಯಲಿದೆ. ಇದರಲ್ಲಿ ಪ್ರತಿನಿತ್ಯ 8–10 ಕೃತಕ ಅಂಗಾಂಗ ಜೋಡಣೆ ಕಾರ್ಯವನ್ನು ನಡೆಸಬಹುದಾಗಿದೆ’ ಎಂದುಜೈಪುರ ಫೂಟ್ ಯುಎಸ್‌ಎನ ಅಧ್ಯಕ್ಷ ಪ್ರೇಮ್‌ ಭಂಡಾರಿ ಅವರು ತಿಳಿಸಿದರು.

ನ್ಯೂಯಾರ್ಕ್‌ನಲ್ಲಿ ಶನಿವಾರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳಿಧರನ್‌ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.‌

‘ನ್ಯೂಯಾರ್ಕ್‌ ಮೂಲದ ಯುವಕ ನಿಖಿಲ್‌ ಮೆಹ್ತಾ ಅವರು ಮೊಬೈಲ್‌ ವ್ಯಾನ್‌ ನಡೆಸುವ ಉಪಾಯ ನೀಡಿದರು. ಈ ಕಾರ್ಯಕ್ರಮ ಆರಂಭಿಸುವ ಕುರಿತಾಗಿ ಈಗಾಗಲೇ ಗುಜರಾತ್‌ನ ಜಿಲ್ಲಾಡಳಿತವೊಂದರ ಜತೆಗೆ ಚರ್ಚಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT