ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಬಿಜೆಪಿ ಗೆಲುವಿಗೆ ಅನಿವಾಸಿ ಗುಜರಾತಿಗಳ ಪಾತ್ರ ದೊಡ್ಡದು: ಅಮಿತ್ ಶಾ

Last Updated 15 ಅಕ್ಟೋಬರ್ 2022, 15:49 IST
ಅಕ್ಷರ ಗಾತ್ರ

ಅಹಮದಾಬಾದ್: ಗುಜರಾತ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸತತ ಗೆಲುವಿನಲ್ಲಿ ಅನಿವಾಸಿ ಗುಜರಾತಿಗಳು (ಎನ್‌ಆರ್‌ಜಿ) ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ

ಮೂರು ದಿನಗಳ ‘ಪ್ರವಾಸಿ ಗುಜರಾತಿ ಪರ್ವ್ 2022’ ಉದ್ಘಾಟನಾ ಸಮಾರಂಭದಲ್ಲಿ ಎನ್‌ಆರ್‌ಜಿಗಳ ಸಭೆ ಉದ್ದೇಶಿಸಿ ಮಾತನಾಡಿದ ಶಾ, ‘ಗುಜರಾತಿಗಳು ಎಲ್ಲೆಲ್ಲಿ ನೆಲೆಸಿದ್ದಾರೆಯೋ ಅಲ್ಲಿ ಅವರು ಆ ರಾಷ್ಟ್ರಗಳು ಹೆಮ್ಮೆಪಡುವಂತೆ ಮಾಡಿದ್ದಾರೆ . ದೇಶ ಮಾತ್ರವಲ್ಲದೆ ಪ್ರಪಂಚದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ’ ಎಂದರು.

’1990 ರಿಂದ ಚುನಾವಣೆ ನಡೆದಾಗಲೆಲ್ಲಾ ಗುಜರಾತ್‌ ಜನರು ಬಿಜೆಪಿ ಗೆಲ್ಲುವಂತೆ ಮಾಡಿದ್ದಾರೆ. ಈ ಗೆಲುವಿನಲ್ಲಿ ಎನ್‌ಆರ್‌ಜಿಗಳು ದೊಡ್ಡ ಪಾತ್ರ ವಹಿಸಿವೆ’ ಎಂದು ಶಾ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

‘ಬಿಜೆಪಿ ಸರ್ಕಾರ ಗುಜರಾತ್‌ ಅಭಿವೃದ್ಧಿಗೆ ಶ್ರಮಿಸಿದೆ. ನರೇಂದ್ರ ಮೋದಿ ಅವರು ಗುಜರಾತ್‌ಗೆ ಜಾಗತಿಕ ಗುರುತು ನೀಡಿದ್ದಾರೆ. ಇದನ್ನು ನಾವೆಲ್ಲಾ ಮುಂದುವರಿಸಬೇಕು. 2022 ರ ಚುನಾವಣೆಯಲ್ಲಿ ಬಿಜೆಪಿ, ನರೇಂದ್ರಭಾಯಿ ಮತ್ತು ದೇಶದ ಅಭಿವೃದ್ಧಿ ಕುರಿತ ಸಂದೇಶವನ್ನು ಗ್ರಾಮೀಣರಿಗೆ ತಿಳಿಸುವ ಮೂಲಕಬಿಜೆಪಿಯ ರಾಯಭಾರಿಗಳಾಗಬೇಕೆಂದು ಮನವಿ ಮಾಡುತ್ತೇನೆ’ ಶಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT