ಬೆಂಗಳೂರು: ಸಾಧಿಸುವ ಛಲವಿದ್ದರೆ ಅಂಗವಿಕಲತೆ ಒಂದು ನ್ಯೂನತೆ ಅಲ್ಲ ಎಂಬುದಕ್ಕೆ ದೆಹಲಿಯ ವ್ಯಕ್ತಿಯೊಬ್ಬರು ಉದಾಹರಣೆಯಾಗಿದ್ದಾರೆ.

ಕೈಕಾಲುಗಳಿಲ್ಲದ ಈ ವ್ಯಕ್ತಿಗೆ ದುಡಿದು ಬದುಕುವ ಸ್ವಾಭಿಮಾನ ಮಾತ್ರ ಕುಂದಿಲ್ಲ. ಸ್ಕೂಟಿ ಎಂಜಿನ್ ಬಳಸಿ ತಯಾರಿಸಿದ ಬ್ಯಾಟರಿ ರಿಕ್ಷಾ ರೀತಿಯ ವಾಹನವನ್ನು ಓಡಿಸುತ್ತಾ ಅವರು ಜೀವನ ಸಾಗಿಸುತ್ತಿದ್ದಾರೆ. ಈ ವಿಡಿಯೊವನ್ನು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎರಡೂ ಕೈ ಮತ್ತು ಕಾಲುಗಳಿಲ್ಲದ ವ್ಯಕ್ತಿ, ಪ್ರಯಾಣಿಕರ ಪ್ರಶ್ನೆಗೆ ಉತ್ತರಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಇದು ಸ್ಕೂಟಿಯ ಇಂಜಿ್ನ್ ಅಲ್ಲವೇ ಎಂದು ಪ್ರಯಾಣಿಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗವೈಕಲ್ಯದ ನಡುವೆಯೂ ವಾಹನವನ್ನು ಚಲಾಯಿಸುತ್ತಿರುವ ಬಗ್ಗೆ ವಿವರಿಸಿದರು.

'ನನಗೆ ಹೆಂಡತಿ, ಇಬ್ಬರು ಪುಟ್ಟ ಮಕ್ಕಳು ಮತ್ತು ವಯಸ್ಸಾದ ತಂದೆ ಇದ್ದಾರೆ. ಅದಕ್ಕಾಗಿಯೇ ನಾನು ದುಡಿಯಲು ಬರುತ್ತೇನೆ' ಎಂದು ಹೆಸರು ಹೇಳಲಿಚ್ಛಿಸದ ಅಂಗವಿಕಲ ವ್ಯಕ್ತಿ ಹೇಳುತ್ತಾರೆ. ಐದು ವರ್ಷಗಳಿಂದ ನಾನು ಈ ವಾಹನವನ್ನು ಓಡಿಸುತ್ತಿದ್ದೇನೆ ಎಂದು ಅವರು ವಿವರಿಸಿದರು. ತಮ್ಮ ಛಲವನ್ನು ಕಂಡು ಅಭಿನಂದಿಸಿ ವಿಡಿಯೊ ಚಿತ್ರೀಕರಿಸುವ ಜನರನ್ನು ಕಂಡು ಮುಗುಳ್ನಗೆ ಬೀರುತ್ತಿದ್ದರು.

‘ಈ ದಿನ ನನ್ನ ಟೈಮ್ ಲೈನ್‌ಗೆ ಈ ವಿಡಿಯೊ ಬಂದಿದೆ. ಇದು ಎಷ್ಟು ಹಳೆಯದು ಅಥವಾ ಎಲ್ಲಿಂದ ಬಂದಿದೆ ಎಂದು ನನಗೆ ತಿಳಿದಿಲ್ಲ, ಆದರೆ ಈ ಸಂಭಾವಿತ ವ್ಯಕ್ತಿಯಿಂದ ನಾನು ವಿಸ್ಮಯಗೊಂಡಿದ್ದೇನೆ. ಅವರು ತಮ್ಮ ಅಂಗವೈಕಲ್ಯದ ನಡುವೆ ಅವರು ತಾವು ಹೊಂದಿರುವುದಕ್ಕೆ ಕೃತಜ್ಞರಾಗಿದ್ದಾರೆ’ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ಧಾರೆ.

ಬಳಿಕ ಅವರು ವಿಡಿಯೊವನ್ನು ಸಹೋದ್ಯೋಗಿ ರಾಮ್ ಮತ್ತು ಮಹೀಂದ್ರಾ ಲಾಜಿಸ್ಟಿಕ್ಸ್ ಅವರಿಗೆ ಟ್ಯಾಗ್ ಮಾಡಿದ್ದು,‘ರಾಮ್, ಅವರನ್ನು ವ್ಯಾಪಾರದ ಡೆಲಿವರಿ ಸಹಾಯಕರನ್ನಾಗಿ ಮಾಡಬಹುದೇ?’ಎಂದು ಕೇಳಿದ್ದಾರೆ.

ಈ ವಿಡಿಯೊವನ್ನು ನಿನ್ನೆ ಮಧ್ಯಾಹ್ನ ಮಹೀಂದ್ರಾ ಅವರು ಹಂಚಿಕೊಂಡಾಗಿನಿಂದ ಟ್ವಿಟರ್‌ನಲ್ಲಿ 50,000 ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಈ ವಿಡಿಯೊ ಒಂದೆರಡು ವಾರಗಳಿಂದ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.