ಸೋಮವಾರ, ಆಗಸ್ಟ್ 15, 2022
27 °C

ಲ್ಯಾಪ್‌ಟಾಪ್ ಬದಲು ಟ್ಯಾಬ್ಲೆಟ್: ವೆಚ್ಚ ಕಡಿತಕ್ಕೆ ಆಂಧ್ರ ಸರ್ಕಾರ ನಿರ್ಧಾರ

ಪಿಟಿಐ Updated:

ಅಕ್ಷರ ಗಾತ್ರ : | |

DH FILE

ಅಮರಾವತಿ: 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ನಿರ್ಧಾರದಿಂದ ಆಂಧ್ರ ಪ್ರದೇಶ ಸರ್ಕಾರ ಹಿಂದಕ್ಕೆ ಸರಿದಿದೆ. ಸರ್ಕಾರದ ಈ ನಡೆಯಿಂದ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಿರಾಸೆ ಉಂಟಾಗಿದೆ.

ಲ್ಯಾಪ್‌ಟಾಪ್ ನೀಡುವುದು ಅಧಿಕ ವೆಚ್ಚದಾಯಕ ಎನ್ನುವ ಕಾರಣಕ್ಕೆ ಸರ್ಕಾರ ಟ್ಯಾಬ್ಲೆಟ್ ನೀಡಲು ಮುಂದಾಗಿದೆ.

ಬಹುತೇಕ ಡಿಜಿಟಲ್ ಅಪ್ಲಿಕೇಶನ್‌ಗಳು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದಿಲ್ಲ. ಅಲ್ಲದೆ, ವಿದ್ಯಾರ್ಥಿಗಳ ಸಂಖ್ಯೆಯೂ ಅಧಿಕವಾಗಿದ್ದು, ಹೆಚ್ಚಿನ ಖರ್ಚು ಉಂಟಾಗಲಿದೆ ಎಂದು ಸರ್ಕಾರ ಹೇಳಿದೆ. ಹೀಗಾಗಿ ಪ್ರತಿ ಟ್ಯಾಬ್ಲೆಟ್‌ಗೆ ₹12,000 ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲು ಸರ್ಕಾರ ಮುಂದಾಗಿದೆ.

ಈ ಮೊದಲು, 9ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಲಾಗುತ್ತದೆ ಎಂದು ವೈ. ಎಸ್. ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಹೇಳಿತ್ತು. ಆದರೆ, ವೆಚ್ಚ ಹೆಚ್ಚಳ ಮತ್ತು ಪೂರೈಕೆದಾರರೊಂದಿಗಿನ ಸಮಸ್ಯೆಯಿಂದಾಗಿ ಲ್ಯಾಪ್‌ಟಾಪ್ ನೀಡಲು ವಿಫಲವಾಗಿದ್ದು, ಸೆಪ್ಟೆಂಬರ್ 2022ರ ವೇಳೆಗೆ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಒದಗಿಸುವುದಾಗಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು