ಬುಧವಾರ, ಮಾರ್ಚ್ 29, 2023
24 °C

ಚಂಡೀಗಢ: ಮೇಯರ್‌ ಸ್ಥಾನ ಗೆದ್ದ ಬಿಜೆಪಿ- ಎಎಪಿಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಂಡೀಗಢ (ಪಿಟಿಐ): ಚಂಡೀಗಢದ ನೂತನ ಮೇಯರ್‌ ಆಗಿ ಬಿಜೆಪಿಯ ಅನೂಪ್‌ ಗುಪ್ತ ಅವರು ಮಂಗಳವಾರ ಚುನಾಯಿತರಾದರು. 

ಎಎಪಿ ಅಭ್ಯರ್ಥಿ ಜಸ್ಬೀರ್‌ ಸಿಂಗ್‌ ವಿರುದ್ಧ ಕೇವಲ ಒಂದು ಮತದ ಅಂತರದಲ್ಲಿ ಅನೂಪ್‌ ಗೆದ್ದರು.

ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್‌ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಮತ್ತು ಎಎಪಿಯ ತಲಾ 14 ಕೌನ್ಸಿಲರ್‌ಗಳು ಇದ್ದಾರೆ. ಚಂಡೀಗಢ ಸಂಸದೆ ಕಿರಣ್‌ ಖೇರ್‌ ಅವರು ಪಾಲಿಕೆಯ ಪದನಿಮಿತ್ತ ಸದಸ್ಯೆಯಾಗಿದ್ದು ಅವರೂ ಮತ ಚಲಾಯಿಸಿದರು. ಎಎಪಿ ಜಸ್ಬೀರ್‌ ಸಿಂಗ್‌ 14 ಮತಗಳನ್ನು ಪಡೆದರೆ, ಬಿಜೆಪಿಯ ಅನೂಪ್‌ 15 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು