ಶನಿವಾರ, ಏಪ್ರಿಲ್ 1, 2023
23 °C

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಶೇ.10 ಮೀಸಲಾತಿ: ಆಂಧ್ರ ಸರ್ಕಾರದಿಂದ ಹೊಸ ಆದೇಶ

ಪಿಟಿಐ Updated:

ಅಕ್ಷರ ಗಾತ್ರ : | |

ಅಮರಾವತಿ: ಸಂವಿಧಾನದ 103ನೇ ತಿದ್ದುಪಡಿ ಕಾಯ್ದೆಯ ಪ್ರಕಾರ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಶೇ 10 ರಷ್ಟು ಮೀಸಲಾತಿ ಒದಗಿಸುವ ಹೊಸ ಆದೇಶವನ್ನು ಆಂಧ್ರಪ್ರದೇಶ ಸರ್ಕಾರ ಹೊರಡಿಸಿದೆ.

ಒಟ್ಟು ಕುಟುಂಬದ ವಾರ್ಷಿಕ ಆದಾಯವು ₹ 8 ಲಕ್ಷಕ್ಕಿಂತ ಕಡಿಮೆ ಇರುವ ಮತ್ತು ಸದ್ಯ ಅಸ್ತಿತ್ವದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ವ್ಯಾಪ್ತಿಗೆ ಒಳಪಡದ ವ್ಯಕ್ತಿಗಳು ಇಡಬ್ಲ್ಯೂಎಸ್ ಮೀಸಲಾತಿಯ ಲಾಭವನ್ನು ಪಡೆಯುತ್ತಾರೆ ಎಂದು ಮುಖ್ಯ ಕಾರ್ಯದರ್ಶಿ ಆದಿತ್ಯ ನಾಥ್ ದಾಸ್ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಇಡಬ್ಲ್ಯೂಎಸ್ ಅಡಿಯ ಶೇಕಡಾ 10 ಮೀಸಲಾತಿಯನ್ನು ವಿಂಗಡಿಸಿ ಅರ್ಧದಷ್ಟು ವಿಶೇಷವಾಗಿ ಕಾಪು ಸಮುದಾಯಕ್ಕೆ ನೀಡಿ, ಉಪ-ವರ್ಗವನ್ನಾಗಿ ಮಾಡಿದ್ದ ಹಿಂದಿನ ಟಿಡಿಪಿ ಸರ್ಕಾರದ 2019ರ ಆದೇಶವನ್ನು ಈ ಹೊಸ ಆದೇಶ ರದ್ದುಪಡಿಸುತ್ತದೆ.

ಟಿಡಿಪಿ ಸರ್ಕಾರವು ಕಾಪು ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು 2017 ರಲ್ಲಿ ಪ್ರಯತ್ನಿಸಿತ್ತು. ಆದರೆ, ಮಸೂದೆಗೆ ಕೇಂದ್ರ ಅನುಮತಿ ನೀಡಿರಲಿಲ್ಲ.

‘2019ರ ಮಸೂದೆ (ನಂ .33) ಮತ್ತು ಕಾಯ್ದೆ ಸಂಖ್ಯೆ 14 ಮತ್ತು 15 ಪರಸ್ಪರ ವಿರೋಧಾಭಾಸವಾಗಿವೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ಒಟ್ಟು ಮೀಸಲಾತಿಯನ್ನು ತೆಗೆದುಕೊಂಡು ಬಿ.ಸಿ.ಎಫ್ ಎಂಬ ಪ್ರತ್ಯೇಕ ವರ್ಗದ ಮೂಲಕ ಕಾಪು ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಮಸೂದೆ ಪ್ರಯತ್ನಿಸುತ್ತದೆ. ’ಎಂದು ಮುಖ್ಯ ಕಾರ್ಯದರ್ಶಿ ಬುಧವಾರ ಮಧ್ಯರಾತ್ರಿಯ ಆದೇಶದಲ್ಲಿ ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು