ಮಂಗಳವಾರ, ಮೇ 24, 2022
25 °C

ಹ್ಯಾಂಡ್‌ ಗ್ರೆನೆಡ್‌ ಪತ್ತೆ: ಯೋಧನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಭಾರತೀಯ ಸೇನೆಯ ಯೋಧರೊಬ್ಬರ ಬ್ಯಾಗ್‌ನಲ್ಲಿ ಜೀವಂತ ಹ್ಯಾಂಡ್‌ ಗ್ರೆನೆಡ್‌ ಪತ್ತೆಯಾಗಿದ್ದು, ಯೋಧನನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ವೆಲ್ಲೂರು ಮೂಲದ ಬಾಲಾಜಿ ಸಂಪತ್‌ ಬಂಧಿತ ಯೋಧ. ನಿಲ್ದಾಣದಲ್ಲಿ ಬ್ಯಾಗ್‌ಗಳನ್ನು ತಪಾಸಣೆ ಮಾಡುವಾಗ ಜೀವಂತ ಹ್ಯಾಂಡ್‌ ಗ್ರೆನೆಡ್‌ ಪತ್ತೆಯಾಗಿದೆ. ಬಂಧಿತ ಯೋಧ ಇಂಡಿಗೋ ವಿಮಾನದಲ್ಲಿ ಶ್ರೀನಗರದಿಂದ ದೆಹಲಿ ಮೂಲಕ ಚೆನ್ನೈಗೆ ತೆರಳಬೇಕಿತ್ತು. ಹೆಚ್ಚಿನ ವಿಚಾರಣೆಗಾಗಿ ಆರೋಪಿ ಯೋಧನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು