ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಜಾತಿಯವರ ತೋಟದಲ್ಲಿ ಹೂ ಕಿತ್ತಿದ್ದಕ್ಕೆ 40 ದಲಿತ ಕುಟುಂಬಗಳಿಗೆ ಬಹಿಷ್ಕಾರ

Last Updated 25 ಆಗಸ್ಟ್ 2020, 3:53 IST
ಅಕ್ಷರ ಗಾತ್ರ

ದೆಂಕನಾಲ್‌ (ಒಡಿಶಾ): ಮೇಲ್ಜಾತಿಗೆ ಸೇರಿದ ವ್ಯಕ್ತಿಯ ತೋಟದಲ್ಲಿ ಹೂ ಕಿತ್ತಿದ್ದಕ್ಕೆ 40 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ತಡವಾಗಿ ಬಹಿರಂಗವಾಗಿದೆ.

ಒಡಿಶಾದ ದೆಂಕನಾಲ್‌ ಜಿಲ್ಲೆಯ ಕಾಂತಿಯೊ ಕಟೆನಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

‘ಮೇಲ್ಜಾತಿಯವರ ತೋಟದಲ್ಲಿ ನಮ್ಮ ಸುಮುದಾಯದ ಬಾಲಕಿ ಸೂರ್ಯಕಾಂತಿ ಹೂ ಕಿತ್ತಳು ಎಂಬ ಕಾರಣಕ್ಕೆ 40 ಕುಟುಂಬಗಳಿಗೆ ಬಹಿಷ್ಕಾರ ವಿಧಿಸಲಾಗಿದೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೆವು. ಸಮಸ್ಯೆ ಬಗೆಹರಿಸಿಕೊಳ್ಳಲು ಪೊಲೀಸರು ಇಬ್ಬರನ್ನೂ ಸಭೆಗೆ ಕರೆದಿದ್ದರು. ಆದರೆ, ಅವರು ಬರಲಿಲ್ಲ. ಕೆಲ ದಿನಗಳ ನಂತರ ನಾವು ಮತ್ತೆ ದೂರು ನೀಡಿದ್ದೆವು,’ ಎಂದು ಬಹಿಷ್ಕಾರಕ್ಕೊಳಗಾದ ಕುಟುಂಬಗಳಲ್ಲಿ ಒಬ್ಬರಾದ ಬಿಜಯ್‌ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಗ್ರಾಮದ ಮುಖಂಡ ಪ್ರಾಣಬಂಧು ದಾಸ್‌, ‘ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದೆ. ಪ್ರಕರಣ ಈಗ ಜಾತಿಯ ತಿರುವು ಪಡೆದುಕೊಂಡಿದೆ. ಸೋಮವಾರ ಪೊಲೀಸ್‌ ಠಾಣೆಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದೆ. ಸಭೆಯಲ್ಲಿ ಎಲ್ಲರೂ ಒಪ್ಪಿಕೊಂಡಂತೆ, ನಾವು ಈ ಮೊದಲಿನಂತೇ ಜೀವನ ನಡೆಸಲಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT