ಮುಂಬೈ: ಬಾಲಿವುಡ್ ತಾರೆ ಶಾರುಕ್ ಖಾನ್ ಮಗ ಆರ್ಯನ್ ಖಾನ್ಗೆ ಡ್ರಗ್ಸ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಈ ಪ್ರಕರಣ ಕುರಿತು ಬಾಲಿವುಡ್ ಮಾತನಾಡಲು ಆರಂಭಿಸಿದೆ. ಚಿತ್ರರಂಗವನ್ನು ಹೇಗೆ ಗುರಿ ಮಾಡಲಾಗುತ್ತಿದೆ ಎಂದು ಬಾಲಿವುಡ್ ಮಂದಿ ಮಾತನಾಡಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಮತ್ತು ನಟ ರಾಜ್ ಬಬ್ಬರ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ‘ಆರ್ಯನ್ ಖಾನ್ ಪ್ರಕರಣದಲ್ಲಿ ಸಾಕ್ಷಿಗಳು ಇಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿತು.ಆ ವೇಳೆ ನಾನು, ಹಡಗಿನ ಪ್ರಕರಣ ಸೇರಿ ಸಿನಿಮಾ ಮಂದಿಯ ಮಾನಹಾನಿ ಮಾಡಲು ಪ್ರಸಾರ ಮಾಡಿದ್ದ ಸುದ್ದಿಗಳು ಮತ್ತು ವಿಡಿಯೊಗಳನ್ನು ಪುನಃ ನೋಡಿದೆ. ಅವುಗಳಲ್ಲಿ ವೃತ್ತಿಜೀವನಕ್ಕೆ ಪೆಟ್ಟು, ಮುಖದಲ್ಲಿ ಬೇಸರದ ಛಾಯೆ, ಶಾರುಕ್ ಖಾನ್ರ ಮೌನ ಇತ್ತು. ಜನ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ’ ಎಂದು ಬಬ್ಬರ್ ಹೇಳಿದ್ದಾರೆ.

‘ಆರ್ಯನ್ ಖಾನ್ ಮತ್ತು ಇತರರ ವಿರುದ್ಧದ ಡ್ರಗ್ಸ್ ಮೊಕದ್ದಮೆಯನ್ನು ಹೆಚ್ಚು ಅತಿರಂಜಕಗೊಳಿಸಲಾಗಿದೆ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆತ 25 ದಿನಗಳ ಕಾಲ ಅನ್ಯಾಯವಾಗಿ ಕಷ್ಟ ಅನುಭವಿಸಿದ. ಆರೋಪಿಯಿಂದ ಸುಲಿಗೆ ಮಾಡಲು ಸಂಚು ರೂಪಿಸಲಾಗಿತ್ತೇ ಎಂಬ ಅನುಮಾನಗಳು ಇದರಿಂದ ಹೆಚ್ಚಾಗುತ್ತಿವೆ’ ಎಂದು ಬಿಜೆಪಿ ರಾಜ್ಯಸಭೆ ಸದಸ್ಯ ಮತ್ತು ವಕೀಲ ಮಹೇಶ್ ಜೇಠ್ಮಲಾನಿ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.