ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ: ಎಎಸ್ಐ ಬಂಧನ

ಕೋಟಾ, ರಾಜಸ್ಥಾನ: ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಗಿರ್ಧರ್ ಸಿಂಗ್, ‘ಬಾಲ್ಟಾ ಪೊಲೀಸ್ ಠಾಣೆಯ ಎಎಸ್ಐ ಜಗದೀಶ್ ಪ್ರಸಾದ್ ಬಂಧಿತ ಆರೋಪಿ. ಅತ್ಯಾಚಾರ ಸಂತ್ರಸ್ತೆಯು ಜನವರಿ ತಿಂಗಳಿನಲ್ಲಿ ತಮ್ಮ ಅತ್ತೆಯ ವಿರುದ್ಧ ದಾಖಲಿಸಿದ ಪ್ರಕರಣದಲ್ಲಿ ಪ್ರಸಾದ್ ತನಿಖಾಧಿಕಾರಿ ಆಗಿದ್ದರು’ ಎಂದು ತಿಳಿಸಿದರು.
‘ಪ್ರಸಾದ್ ಅವರು ನಾನು ನೀಡಿದ ದೂರಿನ ತನಿಖೆಯ ನೆಪದಲ್ಲಿ ಪದೇ ಪದೇ ಫೋನ್ ಕರೆ ಮಾಡಿ ತೊಂದರೆ ನೀಡುತ್ತಿದ್ದರು. ಸೋಮವಾರ ರಾತ್ರಿ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದಾಗ, ಪ್ರಸಾದ್ ತಮ್ಮನ್ನು ಕಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಮದುವೆ ಸಮಾರಂಭದ ಸ್ಥಳಕ್ಕೆ ಕರೆತಂದಾಗ, ತಮ್ಮ ಪತಿಯನ್ನು ನೋಡಿ ಪರಾರಿಯಾದರು’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪ್ರಸಾದ್, ಸಹಾಯಕ ಇನ್ಸ್ಪೆಕ್ಟರ್ ಆಗಿರುವ ಪೊಲೀಸ್ ಠಾಣೆಯಲ್ಲಿಯೇ ದೂರು ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.