ಗುರುವಾರ , ಜುಲೈ 29, 2021
21 °C
ಸ್ಪೀಕರ್‌ಗೆ ರಾಜೀನಾಮೆ ಪತ್ರ ಸಲ್ಲಿಸಿದ ರೂಪಜ್ಯೋತಿ ಕುರ್ಮಿ

ಅಸ್ಸಾಂ: ಕಾಂಗ್ರೆಸ್‌ ತೊರೆದ ಶಾಸಕ ರೂಪಜ್ಯೋತಿ ಕುರ್ಮಿ, ಶೀಘ್ರ ಬಿಜೆಪಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಗುವಾಹಟಿ: ಅಸ್ಸಾಂನ ಕಾಂಗ್ರೆಸ್‌ ಶಾಸಕ ರೂಪಜ್ಯೋತಿ ಕುರ್ಮಿ ಶುಕ್ರವಾರ ರಾಜೀನಾಮೆ ನೀಡಿದ್ದು, ಶೀಘ್ರ ಬಿಜೆಪಿ ಸೇರಲಿದ್ದಾರೆ.

ವಿಧಾನಸಭೆ ಕಚೇರಿಯಲ್ಲಿ ಸ್ಪೀಕರ್‌ ಬಿಸ್ವಜೀತ್‌ ದೈಮಾರಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ಕಾಂಗ್ರೆಸ್‌ ಪಕ್ಷಕ್ಕೆ ನೀಡಿರುವ ರಾಜೀನಾಮೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿರುವುದಾಗಿ ಕುರ್ಮಿ ತಿಳಿಸಿದ್ದಾರೆ.

ನಾಲ್ಕು ಬಾರಿ ಶಾಸಕರಾಗಿರುವ ಕುರ್ಮಿ ಜೂನ್‌ 21ರಂದು ಬಿಜೆಪಿ ಸೇರಲಿದ್ದಾರೆ. ಇದೇ ವೇಳೆ, ಪಕ್ಷ ವಿರೋಧಿ ಚಟುವಟಿಕೆಗಾಗಿ ಕುರ್ಮಿ ಅವರನ್ನು ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿದೆ.

ಬುಡಕಟ್ಟು ಸಮುದಾಯಕ್ಕೆ ಸೇರಿರುವ ಕುರ್ಮಿ ಅವರು, ಮರಿಯಾನಿ ಕ್ಷೇತ್ರದಿಂದ 2006ರಿಂದ ಆಯ್ಕೆಯಾಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು