ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಹೊಸವರ್ಷದ ಮೊದಲ ದಿನ 60 ಸಾವಿರ ಮಕ್ಕಳು ಜನನ: ಯುನಿಸೆಫ್‌

Last Updated 5 ಜನವರಿ 2021, 6:04 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಹೊಸ ವರ್ಷದ ಮೊದಲ ದಿನವೇವಿಶ್ವದಾದ್ಯಂತ 3,71,500ಕ್ಕೂ ಹೆಚ್ಚು ಶಿಶುಗಳು ಜನಿಸಿವೆ. ಈ ಬಾರಿ ಭಾರತವು ಅತಿ ಹೆಚ್ಚು ಜನನ ಪ್ರಮಾಣ ದಾಖಲಿಸಿದ್ದು, ಇದೇ ದಿನ ಭಾರತದಲ್ಲಿ ಸುಮಾರು 60,000 ಶಿಶುಗಳು ಜನಿಸಿವೆ ಎಂದು ಯುನಿಸೆಫ್‌ ತಿಳಿಸಿದೆ.

ವಿಶ್ವದಲ್ಲಿ 2021ರ ಜನವರಿ 1ರಂದು ಪ್ರಮುಖವಾಗಿ 10 ರಾಷ್ಟ್ರಗಳಲ್ಲಿ ಅತಿ ಹೆಚ್ಚು ಮಕ್ಕಳು ಜನಿಸಿವೆ. ಭಾರತ (59,995), ಚೀನಾ (35,615), ನೈಜೀರಿಯಾ (21,439), ಪಾಕಿಸ್ತಾನ (14,161), ಇಂಡೋನೇಷ್ಯಾ (12,336), ಇಥಿಯೋಪಿಯಾ (12,006), ಅಮೆರಿಕ (10,312), ಈಜಿಪ್ಟ್‌ (9,455), ಬಾಂಗ್ಲಾದೇಶ (9,236) ಮತ್ತು ಕಾಂಗೊ ಗಣರಾಜ್ಯದಲ್ಲಿ (8,640) ಮಕ್ಕಳು ಜನಿಸಿದ್ದಾರೆ ಎಂದು ಯುನಿಸೆಫ್‌ ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿದೆ.

2021ನೇ ವರ್ಷದಲ್ಲಿ ಸುಮಾರು 14 ಕೋಟಿ ಮಕ್ಕಳು ಜನಿಸಬಹುದು. ಇವರ ಜೀವಿತಾವಧಿ ಅಂದಾಜು 84 ವರ್ಷ ಇರಲಿದೆ ಎಂದು ಯುನಿಸೆಫ್‌ ಅಂದಾಜಿಸಿದೆ.

‘ಹೊಸ ವರ್ಷದ ಮೊದಲ ದಿನದಂದು ಜನಿಸಿದ ಮಕ್ಕಳು ಹಿಂದಿನ ವರ್ಷಕ್ಕಿಂತ ವಿಭಿನ್ನ ಜಗತ್ತನ್ನು ಪ್ರವೇಶಿಸಿದ್ದಾರೆ. ಹೊಸವರ್ಷವು ನೂತನ ಅವಕಾಶಗಳನ್ನು ಹೊತ್ತು ತರುತ್ತದೆ. ಅವರಿಗಾಗಿ ನಾವು ಜಗತ್ತನ್ನು ಇನ್ನಷ್ಟು ಸುರಕ್ಷಿತಗೊಳಿಸಬೇಕು’ ಎಂದು ಯುನಿಸೆಫ್‌ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟಾ ಫೋರ್ ತಿಳಿಸಿದ್ದಾರೆ.

ದಶಕಗಳಿಂದ ಮಕ್ಕಳ ರಕ್ಷಣೆಗಾಗಿ ದುಡಿಯುತ್ತಿರುವ ಯುನಿಸೆಫ್‌ 2021ರಲ್ಲಿ ತನ್ನ 75ನೇ ವಾರ್ಷಿಕೋತ್ಸವನ್ನು ಆಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT