ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ಉಲ್ಬಣ: ಮೆಲ್ಬರ್ನ್‌ನಲ್ಲಿ ಸೆ.2ರವರೆಗೆ ಕರ್ಫ್ಯೂ

Last Updated 16 ಆಗಸ್ಟ್ 2021, 6:00 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಕೋವಿಡ್‌ ಸಾಂಕ್ರಾಮಿಕದ ಡೆಲ್ಟಾ ರೂಪಾಂತರ ತಳಿಯ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸೌತ್‌ವೇಲ್ಸ್‌, ಸಿಡ್ನಿ ನಂತರ, ಆಸ್ಟ್ರೇಲಿಯಾದ ಎರಡನೇ ಬಹುದೊಡ್ಡ ನಗರ ಮೆಲ್ಬರ್ನ್‌ನಲ್ಲಿ ಸೋಮವಾರದಿಂದ ಕರ್ಫ್ಯೂ ಘೋಷಿಸಲಾಗಿದೆ.

ಕೊರೊನಾ ಸೋಂಕು ನಿಯಂತ್ರಿಸಲು ಅಧಿಕಾರಿಗಳು ಭಾನುವಾರ ರಾತ್ರಿ ದಿಢೀರನೆ ಕರ್ಫ್ಯೂ ಘೋಷಿಸಿದ್ದರಿಂದ ಮೆಲ್ಬರ್ನ್‌ ನಗರದ 50 ಲಕ್ಷಕ್ಕೂ ಹೆಚ್ಚು ನಿವಾಸಿಗಳು ಸೋಮವಾರದಿಂದ ಮನೆಯಲ್ಲೇ ಇರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಅಗತ್ಯ ಸೇವೆಗಳಿಗಾಗಿ ಕೆಲಸ ಮಾಡುವವರು ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

‘ವಾರಾಂತ್ಯದಲ್ಲಿ ರಸ್ತೆ ಬದಿ ಮತ್ತು ಪಬ್‌ಗಳಲ್ಲಿ ನಡೆದ ಸರಣಿ ಪಾರ್ಟಿಗಳು, ಮನೆಗಳಲ್ಲಿ ವಾರಾಂತ್ಯದ ಕೂಟಗಳ ಅಬ್ಬರದ ಪರಿಣಾಮವಾಗಿ ಸೋಂಕು ಉಲ್ಬಣಗೊಂಡಿದೆ. ಈ ಕಾರಣಕ್ಕಾಗಿ ನಗರದಲ್ಲಿ ದಿಢೀರನೇ ಕರ್ಫ್ಯೂ ವಿಧಿಸುವ ನಿರ್ಧಾರಕ್ಕೆ ಬರಲಾಯಿತು‘ ಎಂದು ವಿಕ್ಟೋರಿಯಾ ರಾಜ್ಯದ ಪ್ರೀಮಿಯರ್ ಡಾನ್ ಆಂಡ್ರ್ಯೂಸ್ ತಿಳಿಸಿದ್ದಾರೆ.

‘ಅನೇಕ ಜನರು ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ಗಮನಿಸಿದ್ದೇವೆ. ನಿಯಮ ಪಾಲನೆ ಮಾಡದೇ, ತುಂಬಾ ಅಸಭ್ಯವಾಗಿ ನಡೆದುಕೊಳ್ಳುತ್ತಾರೆ. ಸಿಡ್ನಿ ನಗರದಲ್ಲಿ ಆದಂತೆ ಈ ನಗರದಲ್ಲೂ ಸಮಸ್ಯೆ ಉಂಟಾಗಬಾರದೆಂಬ ಕಾರಣಕ್ಕಾಗಿ ಸೆಪ್ಟೆಂಬರ್ 2 ರವರೆಗೆ ಕರ್ಫ್ಯೂವನ್ನು ವಿಸ್ತರಿಸಲಾಗುತ್ತಿದೆ‘ ಎಂದು ಅವರು ಹೇಳಿದರು.

ನ್ಯೂ ಸೌತ್ ವೇಲ್ಸ್ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿಲಾಗಿದ್ದು, ಅಲ್ಲಿನ 80 ಲಕ್ಷ ನಿವಾಸಿಗಳು ಮನೆಗಳಲ್ಲೇ ಬಂಧಿಯಾಗಿದ್ದಾರೆ. ಸಿಡ್ನಿಯಲ್ಲಿ ಎರಡು ತಿಂಗಳ ಹಿಂದೆಯೇ ಲಾಕ್‌ಡೌನ್ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT