ಶನಿವಾರ, ಸೆಪ್ಟೆಂಬರ್ 25, 2021
22 °C

ಚಂದ್ರಶೇಖರ್ ಆಜಾದ್ ಜೀವನ ಚರಿತ್ರೆ ಕುರಿತ ‘ಅಜೇಯ’ ಕಾದಂಬರಿ ಇಂಗ್ಲಿಷ್‌ಗೆ ಅನುವಾದ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಹೆಸರಾಂತ ಲೇಖಕ ಬಾಬು ಕೃಷ್ಣಮೂರ್ತಿ ರಚಿತ ಕ್ರಾಂತಿಕಾರಿ ಚಂದ್ರಶೇಖರ್‌ ಆಜಾದ್‌ ಅವರ ಜೀವನ ಚರಿತ್ರೆ ಕುರಿತ ‘ಅಜೇಯ’ ಕಾದಂಬರಿಯು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ಸ್ವಾತಂತ್ರ್ಯ ಸೇನಾನಿ ಆಜಾದ್‌ ಅವರ 115ನೇ ಜನ್ಮ ದಿನದ ಪ್ರಯುಕ್ತ ಆಗಸ್ಟ್‌ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪುಸ್ತಕ ಪ್ರಕಾಶನ ಸಂಸ್ಥೆ ಗರುಡ ಪ್ರಕಾಶನ ಶುಕ್ರವಾರ ತಿಳಿಸಿದೆ.

ಮಂಜುಳಾ ಟೇಕಲ್‌ ಅವರು ಈ ಕಾದಂಬರಿಯನ್ನು ‘ಆಜಾದ್‌: ದಿ ಇನ್‌ವಿನ್ಸಿಬಲ್‌’ ಶೀರ್ಷಿಕೆಯಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

ಆಜಾದ್‌ರ ಕೈ ಬರಹದ ಪತ್ರಗಳು ಹಾಗೂ ಅವರ ಕ್ರಾಂತಿಕಾರಿ ಚಟುವಟಿಕೆಗಳಿಗೆ ಸಂಬಂಧಿಸಿದ ಅಪೂರ್ವ ದಾಖಲೆಗಳು, ಅವರ ಸಮಕಾಲೀನರ ಜೀವನಚರಿತ್ರೆಯ ಉಲ್ಲೇಖಗಳು ಹಾಗೂ ಸ್ವಾತಂತ್ರ್ಯ ಪೂರ್ವ ಭಾರತದ ಸುದ್ದಿ ಮೂಲಗಳ ದಾಖಲೆಗಳೊಂದಿಗೆ  ಆಜಾದ್‌ರ ಸಮಗ್ರ ವ್ಯಕ್ತಿ ಚಿತ್ರಣವನ್ನು ಈ ಕಾದಂಬರಿ ಚಿತ್ರಿಸಿದೆ.

1974ರಲ್ಲಿ ಕನ್ನಡದಲ್ಲಿ ಪ್ರಕಟವಾದ ಈ ಕಾದಂಬರಿಯು ಹಲವು ಬಾರಿ ಮರು ಮುದ್ರಣಗಳನ್ನು ಕಂಡಿದೆ. ಲೇಖಕ ಬಾಬು ಕೃಷ್ಣಮೂರ್ತಿ ಅವರಿಗೆ ಈ ಕಾದಂಬರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ತಂದುಕೊಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು