ಶುಕ್ರವಾರ, ಅಕ್ಟೋಬರ್ 7, 2022
23 °C

ಗುರುವಾಯೂರ್ ದೇಗುಲಕ್ಕೆ ಆಯುರ್ವೇದ ವೈದ್ಯ ಕಿರಣ್ ಆನಂದ್ ನಂಬೂದಿರಿ ಮುಖ್ಯ ಅರ್ಚಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳದ ಗುರುವಾಯೂರ್‌ ಶ್ರೀಕೃಷ್ಣ ದೇವಾಲಯದ ಮೇಲ್‌ ಶಾಂತಿಯಾಗಿ (ಮುಖ್ಯ ಅರ್ಚಕ) ಆಯುರ್ವೇದ ವೈದ್ಯ ಡಾ. ಕಿರಣ್‌ ಆನಂದ್‌ ನಂಬೂದಿರಿ (34) ಆಯ್ಕೆಯಾಗಿದ್ದಾರೆ.

ಕಕ್ಕಾಡ್‌ ಓತ್ತಿಕಾನ್‌ ಕುಟುಂಬದ ಕಿರಣ್ ಅವರು ಅಕ್ಟೋಬರ್‌ 1ರಿಂದ ಆರು ತಿಂಗಳ ಅವಧಿಗೆ ಮೇಲ್‌ ಶಾಂತಿಯಾಗಲಿದ್ದಾರೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.

ಕೊಯಮತ್ತೂರಿನಲ್ಲಿ ವ್ಯಾಸಂಗ ಪೂರೈಸಿದ ಬಳಿಕ ಕಿರಣ್ ಅವರು ಆರು ವರ್ಷಗಳ ಕಾಲ ರಷ್ಯಾದ ಮಾಸ್ಕೊದಲ್ಲಿ ಆಯುರ್ವೇದ ವೈದ್ಯರಾಗಿ ಕೆಲಸ ಮಾಡಿದ್ದರು. ಶಾಸ್ತ್ರೀಯ ಸಂಗೀತದಲ್ಲೂ  ಅವರುಪರಿಣಿತರಾಗಿದ್ದಾರೆ.

‘ಮೇಲ್‌ ಶಾಂತಿಯಾಗಿ ಆಯ್ಕೆಯಾಗಿರುವುದಕ್ಕೆ ಕೃತಾರ್ಥನಾಗಿದ್ದೇನೆ. ಆರು ತಿಂಗಳ ಬಳಿಕ ಮತ್ತೆ ವೈದ್ಯ ವೃತ್ತಿ ಮುಂದುವರಿಸುತ್ತೇನೆ’ ಎಂದು ಕಿರಣ್‌ ಅವರು ತಿಳಿಸಿದ್ದಾರೆ. ಮೇಲ್‌ ಶಾಂತಿ ಹುದ್ದೆಗೆ 41 ಮಂದಿ ಅರ್ಜಿ ಸಲ್ಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು