ಬುಧವಾರ, ಜೂನ್ 29, 2022
23 °C

ಸಮಾಜವಾದಿ ಪಕ್ಷದ ಶಾಸಕರ ಸಭೆಗೆ ಆಜಂ ಖಾನ್, ಶಿವಪಾಲ್ ಗೈರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

 ಲಖನೌ(ಪಿಟಿಐ): ಉತ್ತರ ಪ್ರದೇಶ ವಿಧಾನಸಭೆ ಅಧಿವೇಶನದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಭಾನುವಾರ ಕರೆದಿದ್ದ ಪಕ್ಷದ ಶಾಸಕರ ಸಭೆಗೆ ಆಜಂ ಖಾನ್ ಹಾಗೂ ಶಿವಪಾಲ್ ಯಾದವ್ ಅವರು ಗೈರು ಹಾಜರಾಗಿದ್ದಾರೆ. 

ಇತ್ತೀಚೆಗಷ್ಟೇ ಸೀತಾಪುರ ಕಾರಾಗೃಹದಿಂದ ಬಿಡುಗಡೆಯಾಗಿರುವ ಆಜಂ ಖಾನ್ ಅವರು ಅನಾರೋಗ್ಯ ಕಾರಣಕ್ಕೆ ಸಭೆಯಲ್ಲಿ ಭಾಗಿಯಾಗಿಲ್ಲ ಎಂದು ಎಸ್‌ಪಿ ಮುಖಂಡರು ತಿಳಿಸಿದ್ದಾರೆ. ಅಲ್ಲದೆ, ಆಜಂ ಅವರ ಪುತ್ರ ಅಬ್ದುಲ್ಲಾ, ಶಿವಪಾಲ್ ಯಾದವ್ ಸಹ ಈ ಸಭೆಯಲ್ಲಿ ಭಾಗಿಯಾಗಿರಲಿಲ್ಲ. 

ಆದರೆ, ಆಜಂ ಖಾನ್ ಹಾಗೂ ಅವರ ಪುತ್ರ ಅಬ್ದುಲ್ಲಾ ಅವರು ಸೋಮವಾರದ ಮೊದಲ ದಿನದ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.  ಆಜಂ ಖಾನ್ ಅವರು ಬಿಜೆಪಿ ಸರ್ಕಾರದ ವಿರುದ್ಧ ಧ್ವನಿಯೆತ್ತಲಿದ್ದಾರೆ ಎನ್ನಲಾಗಿದೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು